- Advertisement -
- Advertisement -



ಕಾಸರಗೋಡು: ತಾಂತ್ರಿಕ ದೋಷದಿಂದ ಟಗ್‌ಬೋಟ್ ಆಳಸಮುದ್ರದಲ್ಲಿ ಸಿಲುಕಿಕೊಂಡ ಘಟನೆ ಕುಂಬಳೆಯಲ್ಲಿ ನಡೆದಿದ್ದು, ಬೋಟ್ ನಲ್ಲಿರುವ ಆರು ಮಂದಿ ಸುರಕ್ಷಿತರಾಗಿದ್ದಾರೆ.
ಕೊಲ್ಲಂ ನಿಂದ ಮುಂಬೈಗೆ ತೆರಳುತ್ತಿದ್ದ ಬೋಟ್ ಕುಂಬಳೆಯ ಶಿರಿಯದಲ್ಲಿ ದಿನದ ಆರು ನಾಟಿಕಲ್ ಮೈಲ್ ದೂರದ ಆಳಸಮುದ್ರದಲ್ಲಿ ಸಿಲುಕಿಕೊಂಡಿದೆ.
ಬೋಟ್ ನಲ್ಲಿದವರನ್ನು ಸುರಕ್ಷಿತವಾಗಿ ದಡಕ್ಕೆ ತರಲು ಹಾಗೂ ಸಿಲುಕಿಕೊಂಡಿರುವ ಬೋಟ್ ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರಾವಳಿ ಪೊಲೀಸರು ಈಗಾಗಲೇ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಬೋಟ್ ನ ಸ್ಟಿಯರಿಂಗ್ ನಲ್ಲಿ ದೋಷ ಕಂಡುಬಂದಿದ್ದು , ಶೀಘ್ರ ದುರಸ್ತಿಗೊಳಿಸಿ ದಡಕ್ಕೆ ತರಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
- Advertisement -








