Sunday, May 12, 2024
spot_imgspot_img
spot_imgspot_img

ವಿಠಲ್ ಜೇಸಿಸ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲ ವಿಠಲ್ ಜೇಸಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಹಿರಿಯ ಶಿಕ್ಷಕಿಯಾದ ಶ್ರೀಮತಿ ಶಾಲಿನಿ ನೋಂಡರವರು ಮಾತನಾಡುತ್ತ ನನ್ನ ಮತ್ತು ಸಂಸ್ಥೆಯ ಸಂಬಂಧ ತವರು ಮನೆಯಂತೆ, ಅದೇ ರೀತಿ ನಮ್ಮ ವಿದ್ಯಾರ್ಥಿಗಳ , ವಿದ್ಯಾಲಯ, ಶಿಕ್ಷಕರ ಸಂಬಂಧ ಅನ್ಯೂನ್ಯತೆಯಿಂದಿರಬೇಕೆಂದು ಭಾವುಕರಾಗಿ ನುಡಿದರು.

ಪ್ರಾಂಶುಪಾಲರಾದ ಶ್ರೀ. ಜಯರಾಮ ರೈ ಯವರು ಮಾತನಾಡುತ್ತ ಶಿಕ್ಷಕರು ಸದಾ ಶೈಕ್ಷಣಿಕದಿನವನ್ನು ಸಂಭ್ರಮದಿಂದಲೇ ಆಚರಿಸಬೇಕು ಎಂದು ವಿವರಿಸುತ್ತ ಗುರು ವೃತ್ತಿಯ ಪಾವಿತ್ರ್ಯತೆಯ ಬಗ್ಗೆ ವಿವರಿಸಿದರು. ನಿಯಮಿತ ವಿದ್ಯಾರ್ಥಿಗಳು ಸೇರಿ ಎಲ್ಲಾ ಗುರುವೃಂದಕ್ಕೆ ಪುಷ್ಪ ನೀಡಿ ಗೌರವಿಸಲಾಯಿತು.

ಹಳೆವಿದ್ಯಾರ್ಥಿಗಳಾದ ದಿವ್ಯನಿಧಿ ರೈ, ದಿವ್ಯಾಧನುಷ್ ರೈ, ಉಜ್ವಲ ಆಚಾರ್, ರೇನಿಷಾ, ಸುಹಾನಾ, ಯುಕ್ತ, ಮನಸ್ವಿ ಶೆಟ್ಟಿ,ಜೊತೆಯಾಗಿ ತಮ್ಮ ಶಿಕ್ಷಕರಿಗಾಗಿ ‘ಸಂಗೀತ ಸುದೆ ‘ ಕಾರ್ಯಕ್ರಮ ಏರ್ಪಡಿಸಿದರು. ಶಾಲಾ ಆಡಳಿತಾಧಿಕಾರಿಗಳು, ಶಿಕ್ಷಕರು ಉಪಸ್ಥಿತರಿದ್ದರು ಮತ್ತು ವಿವಿಧ ಕಿರು ಆಟಗಳನ್ನು ಆಡಿ ಸಂಭ್ರಮಿಸಿದರು. ದೈಹಿಕ ಶಿಕ್ಷಕ ಭಾನುಪ್ರಕಾಶ್ ಸಹಕರಿಸಿದರು.

- Advertisement -

Related news

error: Content is protected !!