Sunday, June 7, 2026
spot_imgspot_img
spot_imgspot_img

ಕಾಸರಗೋಡು: ವಿವಾಹ ನಿಶ್ಚಯವಾಗಿದ್ದ ಯುವತಿ ನೇಣಿಗೆ ಶರಣು..!!

- Advertisement -
- Advertisement -

ಕಾಸರಗೋಡು: ಸ್ನೇಹಿತೆ ಮೆಸೇಜ್‌ ಮಾಡಿ ವಿವಾಹ ನಿಶ್ಚಯವಾಗಿದ್ದ ಯುವತಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.

ಕಾಸರಗೋಡು ಜಿಲ್ಲೆಯ ಮೈಲಟ್ಟಿ ದೇವನಪೊಡಿಚಾಪರ ಏಕಲ್ ನ ನೀತುಕೃಷ್ಣ (21) ಮೃತರು. ನೀತುಕೃಷ್ಣ ಅವರ ಮದುವೆ ನಿಶ್ಚಯವಾಗಿತ್ತು.ಟೈಲರ್ ಆಗಿರುವ ತಂದೆ ಕೆ. ಕೃಷ್ಣನ್ ಕೆಲಸದ ನಿಮಿತ್ತ ಕಾಸರಗೋಡ್ ಗೆ ಹಾಗೂ ತಾಯಿ ಕೆ.ಟಿ.ಶ್ರೀಲತಾ ಕಾಞಂಗಾಡ್ ಗೆ ತೆರಳಿದ್ದರು. ಈ ವೇಳೆ ನೀತುಕೃಷ್ಣ ನೇಣು ಬಿಗಿದುಕೊಂಡಿದ್ದಾಳೆ.

ಕೂಪಪುನ್ನ ಸ್ವಸ್ತಿ ಕ್ಲಬ್ ಶಿಂಗಾರಿಮೇಳ ಕಲಾವಿದೆಯಾಗಿದ್ದ ಇವರು ಡಿವೈಎಫ್‌ಐ ಕೂಪಪುನ್ನ ಪ್ರಾಂತ ಕಾರ್ಯಕಾರಿ ಸಮಿತಿ ಸದಸ್ಯೆಯಾಗಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಸ್ನೇಹಿತೆಗೆ ಸಂದೇಶ ಕಳುಹಿಸಿ ಈಕೆ ನೇಣು ಬಿಗಿದುಕೊಂಡಿದ್ದಾಳೆ. ನಂತರ ಸ್ನೇಹಿತೆ ಕಳುಹಿಸಿದ ಮೆಸೇಜ್‌ನ್ನು ನೀತುಕೃಷ್ಣ ಸ್ವೀಕರಿಸದ ಕಾರಣ ಅನುಮಾನಗೊಂಡು ತನ್ನ ಸಂಬಂಧಿಕರಿಗೆ ಮಾಹಿತಿ ತಿಳಿಸಿದಳು. ಆದರೆ ಅಲ್ಲಿಗೆ ತಲುಪಿದಾಗ ನೀತು ಶವವಾಗಿ ಪತ್ತೆಯಾಗಿದ್ದಳು.

ನೀತುಕೃಷ್ಣ ಪದವಿ ಮುಗಿಸಿ ಬಿ.ಎಡ್ ಸೇರಲು ತಯಾರಿ ನಡೆಸುತ್ತಿದ್ದರು. ಬೇಕಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!