Friday, June 26, 2026
spot_imgspot_img
spot_imgspot_img

ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ!

- Advertisement -
- Advertisement -

ಕಾಸರಗೋಡು: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಉಳಿಯತ್ತಡ್ಕದ ಎ.ಕೆ ಮುಹಮ್ಮದ್ ಹನೀಫ್ (58), ಮಧೂರು ಚೇನೆಕ್ಕೋಡ್‌ನ ಸಿ. ಎ ಅಬ್ಬಾಸ್ (49), ಉಸ್ಮಾನ್ (55) ಮತ್ತು ಉಳಿಯತ್ತಡ್ಕ ಎಸ್. ಪಿ ನಗರದ ಸಿ. ಅಬ್ಬಾಸ್ (55) ಬಂಧಿತ ಆರೋಪಿಗಳಾಗಿದ್ದಾರೆ.

ಜೂನ್ 26 ರಂದು ಓರ್ವ ಆರೋಪಿ ನಿರ್ಜನ ಪ್ರದೇಶದ ಕಟ್ಟಡಕ್ಕೆ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದಿರುವುದನ್ನು ಗಮನಿಸಿದ ಸ್ಥಳೀಯರು ಆರೋಪಿಯನ್ನು ಪೊಲೀಸ್ ವಶಕ್ಕೆ ಒಪ್ಪಿಸಿದರು. ಉಳಿಯತ್ತಡ್ಕ ಪರಿಸರದ 14 ವರ್ಷದ ಅಪ್ರಾಪ್ತ ಬಾಲಕಿಗೆ ಆಮಿಷವೊಡ್ಡಿ ಈ ಕೃತ್ಯ ನಡೆಸಿರುವುದಾಗಿ ಪ್ರಕರಣದಲ್ಲಿ ದಾಖಲಾಗಿದೆ. ಬಳಿಕ ಬಾಲಕಿಯಿಂದ ಚೈಲ್ಡ್ ಲೈನ್ ಅಧಿಕಾರಿಗಳು ಮಾಹಿತಿ ಪಡೆದುಕೊಂಡು ಪ್ರಕರಣದಲ್ಲಿ ಒಟ್ಟು ಐವರು ಆರೋಪಿಗಳಿದ್ದು, ಇನ್ನೂ ಓರ್ವನ ಬಗ್ಗೆ ಶೋಧ ಮುಂದುವರಿಸಿದ್ದಾರೆ.

- Advertisement -

Related news

error: Content is protected !!