Thursday, June 25, 2026
spot_imgspot_img
spot_imgspot_img

ಕಾಸರಗೋಡು: ಮುಸ್ಲಿಂಲೀಗ್ ಕಾರ್ಯಕರ್ತನ ಹತ್ಯೆಗೆ ಸಂಬಂಧಿಸಿದ 2 ಆರೋಪಿಗಳು ಅರೆಸ್ಟ್!

- Advertisement -
- Advertisement -

ಕಾಸರಗೋಡು: ಕಣ್ಣೂರಿನಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತ ಮನ್ಸೂರ್ ಹತ್ಯೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಕ್ರೈಂ ಬ್ರಾಂಚ್ ಬಂಧಿಸಿದೆ. ಬಂಧಿತ ಪ್ರಮುಖ ಆರೋಪಿಗಳನ್ನು ವಿಪಿನ್ (28) ಮತ್ತು ಸಂಗೀತ್ ಎಂದು ಗುರುತಿಸಲಾಗಿದೆ.

ಡಿವೈಎಸ್ಪಿ ಪಿ ವಿಕ್ರಮ್ ನೇತೃತ್ವದ ಕ್ರೈಂ ಬ್ರಾಂಚ್ ತಂಡ ಇವರಿಬ್ಬರನ್ನು ಬಂಧಿಸಿದ್ದು ಶುಕ್ರವಾರ ತಲಶೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಸ್ಥಳೀಯ ಅಂಗಡಿಗಳ ಹಾಗೂ ಮನೆಗಳಿಂದ ಸಂಗ್ರಹಿಸಿದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಅಪರಾಧ ವಿಭಾಗದ ಅಧಿಕಾರಿಗಳಿಗೆ ಆರೋಪಿಗಳ ಸುಳಿವು ಪತ್ತೆಯಾಗಿತ್ತು.

ಅಲ್ಲದೆ ಇದೇ ಪ್ರಕರಣದಲ್ಲಿ ಈ ಹಿಂದೆ ಬಂಧಿತನಾಗಿದ್ದ ಇನ್ನೊಬ್ಬ ಆರೋಪಿ ಬಿಜೇಶ್‌ನ ವಿಚಾರಣೆ ವೇಳೆ ಸಂಗ್ರಹಿಸಿದ ಮಾಹಿತಿಯ ಪ್ರಕಾರ ತನಿಖಾ ತಂಡ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿತು.

ಪ್ರಕರಣದ ಆರೋಪಿಗಳಲ್ಲಿ ಒಬ್ಬನಾಗಿರುವ ರತೀಶ್‌ ಎಂಬಾತ ಈ ಹಿಂದೆ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಬಂಧಿತ ಇಬ್ಬರು ಆರೋಪಿಗಳು ಸಿಪಿಎಂ ಕಾರ್ಯಕರ್ತರೆಂದು ತಿಳಿದುಬಂದಿದೆ.

- Advertisement -

Related news

error: Content is protected !!