Saturday, September 26, 2026
spot_imgspot_img
spot_imgspot_img

ಕಶೆಕೋಡಿ: ನಮೋ ಭಾರತ ಭಾವ ಜಾಗರಣ ಅಭಿಯಾನ ಆಶ್ರಯದಲ್ಲಿ ಭಜನೆ-ಭಾರತ ಮಾತಾ ಪೂಜನ- ರಕ್ಷಾ ಬಂಧನ ಕಾರ್ಯಕ್ರಮ

- Advertisement -
- Advertisement -

ಕಶೆಕೋಡಿ: ನಮೋ ಭಾರತ ಭಾವ ಜಾಗರಣ ಅಭಿಯಾನ ಆಶ್ರಯದಲ್ಲಿ ಭಜನೆ-ಭಾರತ ಮಾತಾ ಪೂಜನ- ರಕ್ಷಾ ಬಂಧನ ಕಾರ್ಯಕ್ರಮ ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಆ. 17 ನೇ ಆದಿತ್ಯವಾರ ನಡೆಯಿತು.

ಕಾರ್ಯಕ್ರಮದಲ್ಲಿ ಗರುಡ ಮಹಾಕಾಳಿ ಭಜನಾ ಮಂಡಳಿ ಅರಳ, ಇವರಿಂದ ಭಜನಾ ಸೇವೆ ನಡೆಯಿತು. ಬಳಿಕ ಭಾರತ ಮಾತಾ ಪೂಜನ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ರವೀಂದ್ರ ಪ್ರಮುಖರು, ಸಾಮರಸ್ಯ ವೇದಿಕೆ ಮಂಗಳೂರು ವಿಭಾಗ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತ ಮಾತೆಗೆ ಪುಷ್ಪಾರ್ಚನೆ ಗೈಯುವ ಮೂಲಕ ಚಾಲನೆ ನೀಡಲಾಯಿತು.

ಚಂದ್ರ ಮೊಗವೀರ ಸಮನ್ವಯ ಜನಜಾಗೃತಿ ಸಮಿತಿ ದಕ್ಷಿಣ ಕರ್ನಾಟಕ ಇವರು ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮದಲ್ಲಿ ಡೊಂಬಯ್ಯ ಟೈಲರ್‌, ಪಾದರಕ್ಷಕರು ಜಯಾನಂದ ಕಲ್ಲಡ್ಕ, ಯೋಗೀಶ್‌ ಯೋಧರು, ಬಹುಮುಖ ಪ್ರತಿಭೆ ಸ್ವಾತಿ ಕಾಂದಿಲ, ಬಾಲ ಪ್ರತಿಭೆ ಸನ್ನಿಧಿ ಕಶೆಕೋಡಿ, ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರು ಗೋಪಾಲ ಶೆಣೈ, ಗೌರವ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ನೀತಾ ಗಂಗಾಧರ್‌ ಪ್ರೇರಣಾ ಗೀತೆ, ಶ್ರೀಮತಿ ಸೌಮ್ಯ ಮತ್ತು ಕುಮಾರಿ ಚೈತ್ರಾ ಸಂಘಟನಾ ಗೀತೆ ಹಾಗೂ ಗಂಗಾಧರ ಮಾಣಿ ವಂದೇ ಮಾತರಂ ಗೀತೆ ಹಾಡಿದರು. ನಿವೃತ್ತ ಶಿಕ್ಷಕ ರಾಧಕೃಷ್ಣ ಅಡ್ಯಂತಾಯ ಸ್ವಾಗತಿಸಿ, ವಿಜಯ ನಾಯಕ್‌ ನೇರಳೆಕೋಡಿ ಧನ್ಯವಾದವಿತ್ತರು. ಉದಯ್‌ ಸಾಲ್ಯಾನ್‌ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!