Tuesday, June 9, 2026
spot_imgspot_img
spot_imgspot_img

ಜಮ್ಮು ಕಾಶ್ಮೀರ: ಆವಂತಿಪೊರದಲ್ಲಿ ಗುಂಡಿನ ಚಕಮಕಿ; ಓರ್ವ ಉಗ್ರ ಹತ್ಯೆ

- Advertisement -
- Advertisement -

ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಆವಂತಿಪೊರ ಪಟ್ಟಣದ ಪಂಪೊರೆ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಎನ್ ಕೌಂಟರ್ ನಲ್ಲಿ ಓರ್ವ ಉಗ್ರ ಹತ್ಯೆಯಾದ ಘಟನೆ ನಡೆದಿದೆ.

ಭದ್ರತಾ ಪಡೆಗಳ ತಂಡವು ಶಂಕಿತ ಸ್ಥಳದ ಕಡೆಗೆ ಸಮೀಪಿಸುತ್ತಿದ್ದಂತೆ, ಅಡಗಿದ್ದ ಉಗ್ರರು ಪಡೆಗಳ ಮೇಲೆ ಗುಂಡು ಹಾರಿಸಿದರು. ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದೆ. ಗುಂಡಿನ ಕಾಳಗದಲ್ಲಿ ಓರ್ವ ಉಗ್ರ ಸಾವನ್ನಪ್ಪಿದ್ದಾನೆ. ಹತ್ಯೆಯಾದ ಉಗ್ರನ ಗುರುತು ಪತ್ತೆಯಾಗಿಲ್ಲ. ಸದ್ಯ ಪ್ರದೇಶದಲ್ಲಿ ಎನ್ ಕೌಂಟರ್ ಮುಂದುವರಿದಿದ್ದು ಹೆಚ್ಚಿನ ಮಾಹಿತಿ ತಿಳಿದುಬಂದಿಲ್ಲ.

driving
- Advertisement -

Related news

error: Content is protected !!