Sunday, May 19, 2024
spot_imgspot_img
spot_imgspot_img

ಕೌಡಿಚ್ಚಾರು: ಬೈಕ್-ಪಿಕಪ್ ನಡುವೆ ಡಿಕ್ಕಿ; ಸವಾರ ಮೃತ್ಯು..!

- Advertisement -G L Acharya panikkar
- Advertisement -

ಕೌಡಿಚ್ಚಾರು: ಬೈಕ್ ಮತ್ತು ಪಿಕಪ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಕೌಡಿಚ್ಚಾರು ಮದಕ ಎಂಬಲ್ಲಿ

ಮೃತಪಟ್ಟ ಬೈಕ್ ಸವಾರ ಅರಿಯಡ್ಕ ಗ್ರಾಮದ ಸುಂದರ ಪೂಜಾರಿ (60) ಎಂದು ಗುರುತಿಸಲಾಗಿದೆ.

ಬೈಕ್‌ನಲ್ಲಿ ಕೌಡಿಚ್ಚಾರು ಮದಕ ಕಡೆ ಹೋಗುತ್ತಿದ್ದ ವೇಳೆ ಪಿಕಪ್ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟ ಸುಂದರ ಪೂಜಾರಿ ಅವರು ತೀವ್ರ ಗಾಯಗೊಂಡಿದ್ದು, ಅವರನ್ನು ಪಿಕಪ್‌ನಲ್ಲಿದ್ದವರು ಸೇರಿಕೊಂಡು ಆಟೋ ರಿಕ್ಷಾದಲ್ಲಿ ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಬೈಕ್ ಸವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆ ಶವಗಾರ ಕೊಠಡಿಯಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!