Monday, April 29, 2024
spot_imgspot_img
spot_imgspot_img

ಕಾಪು: ಅಕ್ರಮ‌ ಕಸಾಯಿಖಾನೆಗೆ ದಾಳಿ ನಡೆಸಿ ಆರು ಆರೋಪಿಗಳನ್ನು ಬಂಧಿಸಿದ ಪೊಲೀಸರು!

- Advertisement -G L Acharya panikkar
- Advertisement -

ಕಾಪು: ಮೂಳೂರು ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬವರ ಮನೆಯ ಬಳಿಯ ಅಕ್ರಮ‌ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ದನ ಕರುಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, ನಾಲ್ಕು ಕರುಗಳನ್ನು ರಕ್ಷಿಸಿದ್ದಾರೆ.

ಆರೋಪಿಗಳನ್ನು ಮುಳೂರು ನಿವಾಸಿ ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ (32) , ಮಹಮ್ಮದ್ ಅಜರುದ್ಧೀನ್ (26 ವ), ಮಹಮ್ಮದ್ ಹನೀಫ್ ಯಾನೆ ಆಸ್ಪಕ್ (28), ಮಹಮ್ಮದ್ ಇಸ್ಮಾಯಿಲ್ (22), ಚಂದ್ರನಗರ ನಿವಾಸಿ ಉಮ್ಮರಬ್ಬ (60 ವ), ಚಿಕ್ಕಮಗಳೂರು ಕೊಪ್ಪ ನಿವಾಸಿ ನವಾಜ್ (25) ಎಂಬವರನ್ನು ಬಂಧಿಸಿದ್ದು, ಇವರ ಜೊತೆಗಿದ್ದ ಇಸ್ಮಾಯಿಲ್, ರಫೀಕ್, ಅಬ್ಬು ಮಹಮ್ಮದ್ ಎಂಬವರು ಪರಾರಿಯಾಗಿದ್ದಾರೆ.

ಬಂಧಿತರಿಂದ ನಾಲ್ಕು ಕರುಗಳು, 30 ಕೆ.ಜಿ. ಮಾಂಸ, ಕಸಾಯಿಖಾನೆಯಲ್ಲಿ ಉಪಯೋಗಿಸುತ್ತಿದ್ದ ಸಲಕರಣೆಗಳು, ಪಿಕ್ ಅಪ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುನಿಟ್ಟಿನಲ್ಲಿ ರಾಜ್ಯ ಸರಕಾರ ಮತ್ತು ಉಡುಪಿ ಜಿಲ್ಲಾಡಳಿತವು ಲಾಕ್‌ಡೌನ್ ಘೋಷಿಸಿದ್ದು ಜಿಲ್ಲಾಧಿಕಾರಿಗಳ ಆದೇಶ ಮತ್ತು ಮೇಲಾಧಿಕಾರಿಗಳ ಸೂಚನೆಯಂತೆ ಅನಗತ್ಯವಾಗಿ ಓಡಾಟ ನಿಷೇಧಿಸಿದ್ದು, ಈ ಬಗ್ಗೆ ಮಂಗಳವಾರ ಬೆಳಗ್ಗೆ ಪೊಲೀಸ್ ರೌಂಡ್ಸ್ ನಲ್ಲಿ ಇರುವಾಗ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಹಿಂಬದಿ ಅಬ್ಬು ಮಹಮ್ಮದ್ ಎಂಬುವವರ ಮನೆಯ ಸಮೀಪ ದನಗಳನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಉದ್ದೇಶದಿಂದ ವಾಹನದಲ್ಲಿ ದನಗಳನ್ನು ತಂದು ಕಡಿದು ಮಾಂಸ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಪೊಲೀಸರು ದಾಳಿ‌ ನಡೆಸಿದ್ದರು.

ಕಾಪು ಎಸ್‌ಐ ರಾಘವೇಂದ್ರ ಸಿ. ಅವರಿಗೆ ದೊರಕಿದ ಖಚಿತ ಮಾಹಿತಿಯಂತೆ, ಸಿಬಂದಿಗಳ ಜೊತೆಗೂಡಿ ಪೊಲೀಸರು ಧಾಳಿ ನಡೆಸಲಾಗಿದ್ದು, ಪೊಲೀಸರು ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು ನೋಡುತ್ತಿದ್ದಾಗ ಮೂಳೂರು ಸುನ್ನಿ ಸೆಂಟರ್‌ ಹಿಂಬದಿ ಅಬ್ಬು ಮಹಮ್ಮದ್ ಎಂಬವರ ಮನೆ ಹತ್ತಿರ ಪಿಕ್‌ಅಪ್‌ ವಾಹನವೊಂದನ್ನು ನಿಲ್ಲಿಸಿದ್ದರು. ಮನೆಯ ಸಮೀಪ ನಾಲ್ಕು ಕರುಗಳನ್ನು ಕಟ್ಟಿ ಹಾಕಿದ್ದು, ಅಲ್ಲದೇ ಅಲ್ಲೇ ಸಮೀಪದಲ್ಲಿ ಮಾಂಸವನ್ನು ತಯಾರಿ ಮಾಡುತ್ತಿದ್ದು ಪತ್ತೆಯಾಗಿತ್ತು.

ಈ ವೇಳೆ ಆರೋಪಿಗಳು ಪೊಲೀಸ್ ಜೀಪನ್ನು ನೋಡಿ ಪರಾರಿಯಾಗಲೆತ್ನಿಸಿದ್ದು, ಪೊಲೀಸರು ಆರು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದು, ಮತ್ತೆ ಮೂವರು ಪರಾರಿಯಾಗಿದ್ದಾರೆ.

driving

ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ಇಸ್ಮಾಯಿಲ್‌ನೊಂದಿಗೆ ಸೇರಿಕೊಂಡು ಆತನ ಸೂಚನೆಯಂತೆ ಮಜೂರು ಪರಿಸರದಿಂದ 5 ಬಿಡಾಡಿ ದನದ ಕರುಗಳನ್ನು ಪಿಕ್ ಅಪ್ ವಾಹನದಲ್ಲಿ ಕದ್ದು ತಂದು, ಅದರಲ್ಲಿ 1 ಕರುವನ್ನು ಕಡಿದು ಮಾಂಸ ಮಾಡಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!