- Advertisement -
- Advertisement -
ಇತ್ತೀಚೆಗಷ್ಟೇ ಕವಿತಾ ಗೌಡ ಅವರ ಸೀಮಂತ ಶಾಸ್ತ್ರ ಸಂಭ್ರಮದಿಂದ ನೆರವೇರಿತ್ತು. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಕನ್ನಡದ ಕಿರುತೆರೆ ನಟಿ ಕವಿತಾ ಗೌಡ ಹಾಗೂ ಚಂದನ್ ಕುಮಾರ್ಗೆ ಗಂಡು ಮಗು ಜನಿಸಿದೆ. ಇದರಿಂದ ಎರಡು ಫ್ಯಾಮಿಲಿಯಲ್ಲೂ ಖುಷಿ ದುಪ್ಪಟ್ಟಾಗಿದೆ. ಲಕ್ಷ್ಮೀ ಬಾರಮ್ಮ ಸೀರಿಯಲ್ ಮೂಲಕ ಖ್ಯಾತಿ ಪಡೆದುರುವ ಈ ಸ್ಟಾರ್ ಜೋಡಿ ಚೊಚ್ಚಲ ಗಂಡು ಮಗುವಿಗೆ ವೆಲ್ಕಮ್ ಹೇಳಿದ್ದಾರೆ.
ಮುದ್ದು ಕಂದ ಧರೆಗೆ ಆಗಮಿಸಿದ ಎಂದು ಚಂದನ್ ಕುಮಾರ್ ತಮ್ಮ ಇನ್ಸ್ಟಾದಲ್ಲಿ ವಿಡಿಯೋವೊಂದನ್ನ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಮಗುವಿನ ಬೆಳ್ಳಗಿನ ಕಾಲುಗಳು ಮಾತ್ರ ಕಾಣುತ್ತಿದ್ದು ಚಂದನ್ ಕುಮಾರ್ ಮುಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ ಮಗುವಿನ ಮುಖವನ್ನು ರಿವೀಲ್ ಮಾಡಿಲ್ಲ. ನಮ್ಮ ಮುದ್ದು ಕಂದಮ್ಮ ಧರೆಗೆ ಇಳಿದಿದ್ದಾನೆ ಎಂದು ಟ್ಯಾಗ್ ಲೈನ್ ಬರೆದಿದ್ದಾರೆ. ಸದ್ಯ ತಾಯಿ ಕವಿತಾ ಗೌಡ ಹಾಗೂ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.
- Advertisement -