Friday, April 26, 2024
spot_imgspot_img
spot_imgspot_img

ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಕೆದುಂಬಾಡಿ ವತಿಯಿಂದ MNG ಫೌಂಡೇಶನ್ ಸಂಸ್ಥೆಗೆ ಗಾಲಿ ಕುರ್ಚಿಗಳ ಹಸ್ತಾಂತರ ಮತ್ತು ಸನ್ಮಾನ ಕಾರ್ಯಕ್ರಮ

- Advertisement -G L Acharya panikkar
- Advertisement -

ಮಂಗಳೂರು: ಕೆದುಂಬಾಡಿ ಪರಿಸರದ ಉತ್ಸಾಹಿ ಯುವಕರು ಸೇರಿ ಸ್ಥಾಪಿಸಲ್ಪಟ್ಟ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ರಿ) ಸಂಸ್ಥೆಯು ಸ್ಥಾಪಿಸಿದ ಆರಂಭಿಕ ಹಂತದಲ್ಲೇ ಕೆದುಂಬಾಡಿ ಮತ್ತು ಸುತ್ತ ಮುತ್ತಲಿನ ಪರಿಸರದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಮನ ಗೆದ್ದಿದ್ದು,
ಅದರ ಭಾಗವಾಗಿ ದಿನಾಂಕ 27-09-2020 ಆದಿತ್ಯವಾರ ಬೆಳಿಗ್ಗೆ 11.30 ಗಂಟೆಗೆ ಬೈಲ್ ಬ್ರದರ್ಸ್ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ ಸಂಸ್ಥೆಯ ವತಿಯಿಂದ ಬಡ ರೋಗಿಗಳಿಗೆ ವಿತರಿಸುವ ಸಲುವಾಗಿ ಮಂಗಳೂರಿನ ಪ್ರತಿಷ್ಠಿತ MNG ಫೌಂಡೇಶನ್ ಮಂಗಳೂರು ಸಂಸ್ಥೆಗೆ ಗಾಲಿ ಕುರ್ಚಿಗಳ ಹಸ್ತಾಂತರ ಕಾರ್ಯಕ್ರಮ ಮತ್ತು ಆಯ್ದ ಸಮಾಜಸೇವಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವು ಸಂಸ್ಥೆಯ ಕಛೇರಿಯಲ್ಲಿ ಯಶಸ್ವಿಯಾಗಿ ಜರುಗಿತು.
ಸ್ಥಳೀಯ ಬಶೀರ್ ಮುಸ್ಲಿಯಾರ್ ಕೆದುಂಬಾಡಿ ಅವರು ದುಆ ಆಶಿರ್ವಚನ ನೀಡಿದರು ಮತ್ತು ಕೆದುಂಬಾಡಿ ರಹ್ಮಾನಿಯಾ ಜುಮಾ ಮಸೀದಿಯ ಖತೀಬರಾದ ತೌಸೀಫ್ ಅಝ್ಹರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸ್ಥೆಯ ಕೋಶಾಧಿಕಾರಿ ಹಾರಿಸ್ ಕೆದುಂಬಾಡಿ ಅವರು ಸ್ವಾಗತಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಸಿದ್ದೀಕ್ ಕಿನ್ಯಾ ಅವರು ವಹಿಸಿದ್ದರು._
ಕಾರ್ಯಕ್ರಮದಲ್ಲಿ ವರ್ಕಾಡಿ ಪಂಚಾಯತ್ ಮಾಜಿ ಸದಸ್ಯ ರಝಾಕ್ ಅವರು ಪ್ರಾಸ್ತಾವಿಕ ಭಾಷಣ ಮಾಡಿ ಸಂಸ್ಥೆಯ ಕಾರ್ಯವೈಖರಿಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.


MNG ಫೌಂಡೇಶನ್ ಮಂಗಳೂರು ಸಂಸ್ಥೆಯ ಸ್ಥಾಪಕ ಇಲ್ಯಾಸ್ ಮಂಗಳೂರು ಅವರು ದಿಕ್ಸೂಚಿ ಭಾಷಣದಲ್ಲಿ ಸಮಾಜಸೇವೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡು ಸ್ಪೂರ್ತಿದಾಯಕ ಮಾತುಗಳನ್ನಾಡಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಇಮ್ತಿಯಾಝ್ ಕೆದುಂಬಾಡಿ (ಗುಜರಾತ್) ಮತ್ತು ಪ್ರಧಾನ ಕಾರ್ಯದರ್ಶಿ ಸಲಾಮ್ ಕಿನ್ಯಾ ಅವರು ಗಾಲಿ ಕುರ್ಚಿಗಳನ್ನು MNG ಫೌಂಡೇಶನ್ ಸಂಸ್ಥೆಗೆ ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಹಸ್ತಾಂತರಿಸಿದರು.


ಕಾರ್ಯಕ್ರಮದ ಕೊನೆಯ ಹಂತದಲ್ಲಿ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಡು ತಮ್ಮನ್ನು ನಿರಂತರವಾಗಿ ಸಮಾಜಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಮಾಜಸೇವಕರುಗಳಾದ ಇಲ್ಯಾಸ್ ಮಂಗಳೂರು, ಫಯಾಝ್ ಮಾಡೂರು, ಎಮ್.ಎಮ್.ಮೋನು ನಂದಾವರ, ಸಿದ್ದೀಕ್ ಕೊಳಕೆ, ನೌರೀಷ್ ಉಳ್ಳಾಲ, ಶಾಕಿರ್ ಪಾವೂರು ಅವರ ಸೇವೆಯನ್ನು ಗುರುತಿಸಿ ಕೆದುಂಬಾಡಿ ರಹ್ಮಾನಿಯಾ ಜುಮಾ ಮಸೀದಿಯ ಅಧ್ಯಕ್ಷರಾದ ಅಂದು ಹಾಜಿ ಮತ್ತು ಇತರ ಅತಿಥಿಗಳು ಸೇರಿ ಶಾಲು ಹೊದಿಸಿ ಸನ್ಮಾನಿಸಿದರು.


ಈ ಸಂಧರ್ಭದಲ್ಲಿ ವಿದೇಶ ಪ್ರಯಾಣ ಬೆಳೆಸಲಿರುವ ಸಂಸ್ಥೆಯ ಸದಸ್ಯ ಪರ್ವಾಝ್ ದುಬೈ ಅವರನ್ನು ವಿಶೇಷವಾಗಿ ಬೀಳ್ಕೊಡಲಾಯಿತು. ಕಾರ್ಯಕ್ರಮವನ್ನು ಇಮ್ತಿಯಾಝ್ ಕೆದುಂಬಾಡಿ (ಗುಜರಾತ್) ಅವರು ನಿರೂಪಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ಆದಿಲ್ ಕೆದುಂಬಾಡಿ ಅವರು ಧನ್ಯವಾದಗೈದರು.

- Advertisement -

Related news

error: Content is protected !!