Saturday, April 27, 2024
spot_imgspot_img
spot_imgspot_img

ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ “ಕಾಲಾವಧಿ ಮೆಚ್ಚಿ ಜಾತ್ರೆ”

- Advertisement -G L Acharya panikkar
- Advertisement -

ವಿಟ್ಲ: ಬಂಟ್ವಾಳ ತಾಲೂಕಿನ ವೀರಕಂಬ ಗ್ರಾಮದ ಇತಿಹಾಸ ಪ್ರಸಿದ್ಧ ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.12 ರ ಶುಕ್ರವಾರದಂದು ರಾತ್ರಿ ಬೆಂಞಣ್ತಿಮಾರ್ ನಿಂದ ಭಂಡಾರವೇರಿ ವಿವಿಧ ಛಾವಡಿಗಳಲ್ಲಿ ಪೂಜೆ ನಡೆದು ಬೆಳಗಿನ ಜಾವಾ ಕೆಲಿಂಜದಲ್ಲಿ ಪೂಜೆ ನಡೆಯಲಿದೆ.

ಫೆ.13 ರ ಪೂರ್ವಾಹ್ನ ಕುಂಕುಮಾರ್ಚನೆ, ಹೂವಿನ ಪೂಜೆ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ಶ್ರೀ ಅಮ್ಮನವರ “ಕಾಲಾವಧಿ ಮೆಚ್ಚಿ ಜಾತ್ರೆ”ಯು ಸುಡುಮದ್ದು , ಬ್ಯಾಂಡ್ ವಾಲಗದೊಂದಿಗೆ ವಿಜೃಂಭಣೆಯಿಂದ ಜರಗಲಿರುವುದು. ಈ ಉತ್ಸವಕ್ಕೆ ಆಗಮಿಸಿ ಶ್ರೀಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ ಶ್ರೀ ದೈವಾನುಗ್ರಹಕ್ಕೆ ಪಾತ್ರರಾಗಬೇಕಾಗಿ ಮೊಕ್ತೇಸರರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಜಾತ್ರೋತ್ಸವದ ನೇರಪ್ರಸಾರ ಬೃಹತ್ ಎಲ್ ಇ ಡಿ ಪರದೆಯೊಂದಿಗೆ ನಿಮ್ಮ ನೆಚ್ಚಿನ ‘ವಿ ಟಿವಿ ‘ ಯಲ್ಲಿ ಪ್ರಸಾರವಾಗಲಿದೆ.

- Advertisement -

Related news

error: Content is protected !!