Thursday, April 25, 2024
spot_imgspot_img
spot_imgspot_img

ಸಾಧನೆ ಮತ್ತು ನಂಬಿಕೆಯೆಂಬ ಪವಾಡ – ✒️ರಾಧಾಕೃಷ್ಣ ಎರುಂಬು

- Advertisement -G L Acharya panikkar
- Advertisement -

ದಕ್ಷಿಣಕನ್ನಡ ಜಿಲ್ಲೆಯು ದೈವ-ದೇವರ ನಾಡು. ದೇವಾದಿದೇವತೆಗಳ ಅನುಗ್ರಹವೋ ನಂಬಿಕೆಯ ಪ್ರಭಾವವೋ ಶೇಷವಾದ ಸಾನಿಧ್ಯಗಳು ಜೀವ ಪಡೆದು ಜೀರ್ಣೋದ್ದಾರವಾಗುತ್ತಲಿದೆ. ಅನುಗ್ರಹಕಾರಕ ಶಕ್ತಿ ಹೆಚ್ಚಾಗುತ್ತಾ ಜನರಿಗೆ ನಂಬಿಕೆಗಳು ಹೆಚ್ಚಾಗುತಿದೆ.
ಹಲವು ವರ್ಷಗಳ ಹಿಂದೆ ವಿಟ್ಲ ಸೀಮೆಯಲ್ಲಿ ಅರಮನೆಯ ಸುಪರ್ದಿಯಲ್ಲಿದ್ದ ದೇಗುಲ ಎರುಂಬು ಶ್ರೀ ವಿಷ್ಣುಮಂಗಲ ದೇವಸ್ಥಾನ. ಜೊತೆಗೊಂದು, ಸದ್ರಿ ದೇವರ ಹೆಸರಿನ ವಿಷ್ಣುಮಂಗಲ ಹಿರಿಯ ಪ್ರಾಥಮಿಕ ಶಾಲೆ.

ದೇವರ ಪರಿಕಲ್ಪನೆಯನ್ನು ಮೂಡಿಸಿದ ಶಾಲೆ ಇಂದು ಆಜೀರ್ಣವಸ್ಥೆಯಲ್ಲಿರುವುದು ಖೇದನೀಯ. 22ವರ್ಷಗಳ ಹಿಂದೆ ದೇವಾಲಯ ಊರ ಪ್ರಜ್ಞಾವಂತರ ಕೈಯಲ್ಲಿ ಅಭಿವೃದ್ಧಿಯ ಹಾದಿ ಹಿಡಿಯಿತು. ಹುಲ್ಲು ಕಲ್ಲುಗಳು ತುಂಬಿದ್ದ ದೇವಾಲಯ ಶುಚಿಗೊಂಡಿತು. ವರ್ಷಕ್ಕೊಮ್ಮೆ 24ಗಂಟೆಗಳ ಭಜನೆ ಮಾಡುವ ಮನಸು ಊರ ಯುವಕರಿಗೆ ಭಗವಂತ ಕೊಟ್ಟನೋ ಊರ ಸಂಸ್ಕಾರ ಕೊಟ್ಟಿತೋ ತಿಳಿದಿಲ್ಲ. ದೇವಾಲಯದ ಅಂಗಳ ಶುಚಿಗೊಳಿಸಿ ಚಪ್ಪರ ಹಾಕುವ ಕಾರ್ಯಗಳನ್ನು ಊರ ಜನರೇ ಕೈಗೆತ್ತಿಕೊಂಡರು. ಊರ ಕೃಷಿಕರು ಸಾಥ್ ಕೊಟ್ಟರು. ಧನ ಕ್ರೂಡಿಕರಣ ಕ್ಲಿಷ್ಟವಾಗಿದ್ದರೂ ಭಕ್ತಿ ಶ್ರಮಿಸುವಂತೆ ಮಾಡಿತ್ತು ಎನ್ನಬೇಕು. ಮಕ್ಕಳು,ಯುವಕರು,ಹಿರಿಯರೆಂದು ಊರಲ್ಲೆಲ್ಲ ಬೇಡುವ ಸಂಭ್ರಮವಿತ್ತು. ಆದರೂ ಲಕ್ಷದ ವರೆಗಿನ ಆಯ-ವ್ಯಯಗಳು ಆಗಲೇ ನಡೆದಿತ್ತು. 24ಗಂಟೆಗಳ ಆವಿಶ್ರಾಂತ ಭಜನೆಯ ಜೊತೆ ಸಂತರ್ಪಣೆಯು ವಿಜೃಂಭಣೆಯಿಂದಲೇ ನಡೆಯುತ್ತಿತ್ತು.

ಶ್ರಮಿಕರ ಶ್ರದ್ದಾಭಕ್ತಿಯ ಸೇವೆ ಮತ್ತು ಅರ್ಚಕರ ಕರ್ಮಫಲಾಪೇಕ್ಷೆಯಿರದ ಪ್ರಾರ್ಥನೆ ಫಲ ಕೊಟ್ಟಿರಬೇಕು. ಇಂದು ಚಪ್ಪರ ಹಾಕುವೆಲ್ಲೆಡೆ ಕಾಂಕ್ರೀಟ್ ಕಂಬಗಳು ಹಾಗೂ ಚಾವಣಿಗಳು ಎದ್ದು ನಿಂತಿವೆ. ವರ್ಷಕ್ಕೆ ಒಂದು ಬಾರಿ ನಡೆಯುತ್ತಿದ್ದ ಶ್ರಮದ ದುಡಿಮೆ, ಸಂತರ್ಪಣೆ ದೇವರ ಕೃಪಾ ಕಟಾಕ್ಷದಿಂದ, ಅರ್ಚಕರ ಆಕರ್ಷಕ ಪ್ರಾರ್ಥನೆ, ಉತ್ತಮ ಒಡನಾಟ, ಬೆರಳೆಣಿಕೆಯ ಶ್ರಮಿಕರಿಂದ ಅನಾಯಾಸವಾಗಿ ತಿಂಗಳಲ್ಲಿ 4 ಬಾರಿಯಾದರೂ ವೈದಿಕ, ಧಾರ್ಮಿಕ ಸಂತರ್ಪಣೆಯಂತಹ ಕಾರ್ಯಗಳು ನಡೆಯುತ್ತಿದೆ.

ಪವಾಡವೆಂದರೂ ದೇವರ ಸಂಕಲ್ಪದಂತೆ ಯಾರೂ ಸೇವೆ ಮಾಡಬೇಕೋ ಮಾಡಿಸಬೇಕೋ ಅವರು ಸಮಯಕ್ಕೊದಗುತ್ತಾರೆ.ಅರ್ಚಕರು ಶ್ರೇಯಸ್ಸಿನ ತಪಸ್ಸಿನಲ್ಲಿ ಹಗಲಿರುಳು ಶ್ರಮಿಸುತ್ತಾರೆ. ದಶಂಬರ 31ರಂದು ಯಾವುದೇ ಆಂಗ್ಲ ಪ್ರವೃತ್ತಿಯ ಕುಣಿತಗಳೋ, ಕುಡಿತಗಳೋ ನಡೆಯದೆ ನಾಮಸ್ಮರಣೆ ನಡೆಯುತಿದೆಯೆಂಬುದು ಎಲ್ಲರಿಗೂ ಮಾದರಿ ಯಾಗಿದೆ. ಅಲ್ಲದೆ ನಮಿಸಲು ಬಂದ ತೃಪ್ತ ಭಾವುಕರ ಮನದ ನಗೆಯಲ್ಲಿ ದೇವರನ್ನು ಕಾಣುತ್ತಾರೆ ಸೇವಕರು. ಇದೇ ಅಲ್ವೇ ಅನುಗ್ರಹವೆಂದರೆ.

ಇವೆಲ್ಲದರ ಪ್ರತಿಫಲದಿಂದ ಈ ವರ್ಷದ ಬೆಳವಣಿಗೆ ಎನ್ನುವಂತೆ ಸುಮಾರು 5000 ಚದರ ಅಡಿಯ ಸಭಾಭವನ ಕೇವಲ ಒಂದು ತಿಂಗಳಲ್ಲೆ ಎದ್ದು ನಿಂತಿದ್ದು ಒಂದು ಗ್ರಾಮೀಣ ಪ್ರದೇಶದಲ್ಲಿ ಎಂಬುವುದೇ ಹೆಮ್ಮೆ. ಶ್ರಮಿಸಿದ ಕರಸೇವಕರಿಗೆ ತೃಪ್ತ ಭಾವ ತಂದಿರುವುದು ಇಂದು ಲೋಕಾರ್ಪಣೆಯಾಗಿರುವುದು.

ಬನ್ನಿ ಇಂದು (31.12.2022)ಅದೇ ದೇಗುಲದಲ್ಲಿ 22ನೇ ವರ್ಷದ ಅಖಂಡ ಭಜನಾ ಕಾರ್ಯಕ್ರಮ. ಸುಮಾರು 22 ಭಜನಾ ತಂಡಗಳ ನಾಮ ಸಂಕೀರ್ತನೆ 31.12.2022ರ ಬೆಳಿಗ್ಗೆ 6.00ರಿಂದ 1.1.2023ರ ಬೆಳಿಗ್ಗೆ 6.00ರ ವರೆಗೆ ನಡೆಯುತ್ತದೆ. ವಿವಿಧ ವೈದಿಕ ಕಾರ್ಯಕ್ರಮಗಳು, ಬೆಳಿಗ್ಗೆ, ಮದ್ಯಾಹ್ನ, ರಾತ್ರಿ ಉಪಹಾರ ಅನ್ನಸಂತರ್ಪಣೆಗಳು ಜರಗುತ್ತವೆ. ನಿಮ್ಮೆಲ್ಲರನ್ನು ಪ್ರೀತಿ ಪೂರ್ವಕವಾಗಿ ಸರ್ವ ಸದಸ್ಯರಾದ ನಾವೆಲ್ಲ ಆಮಂತ್ರಿಸುತ್ತಿದ್ದೇವೆ.

- Advertisement -

Related news

error: Content is protected !!