Tuesday, April 23, 2024
spot_imgspot_img
spot_imgspot_img

ವಿಟ್ಲ: ಕೇಪು ಸನ್ನಿಧಿಯಲ್ಲಿ ಕಜಂಬು ಉತ್ಸವ ಸಂಪನ್ನ

- Advertisement -G L Acharya panikkar
- Advertisement -
vtv vitla
vtv vitla

ವಿಟ್ಲ: ಡಿ. 16 ರಂದು ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಕಜಂಬು ಉತ್ಸವ ಸಂಪನ್ನ ಗೊಂಡಿತು.

ಮಕ್ಕಳನ್ನು ಸಾಂಕೇತಿಕವಾಗಿ ದೇವರಿಗೆ ಹರಕೆ ರೂಪದಲ್ಲಿ ನೀಡುವ ವಿಶಿಷ್ಟ ನಂಬಿಕೆ, ಸಂಪ್ರದಾಯದ ಇತಿಹಾಸ ಪ್ರಸಿದ್ಧ ಕೇಪು ಶ್ರೀ ಉಳ್ಳಾಲ್ತಿ ದುರ್ಗಾ ಪರಮೇಶ್ವರಿ ಕ್ಷೇತ್ರದಲ್ಲಿ ಗುರುವಾರ ರಾತ್ರಿ ಸಹಸ್ರಾರು ಮಕ್ಕಳು ಕಜಂಬು ಹರಕೆಯ ರೂಪದಲ್ಲಿ ದೇವರಿಗೆ ಸಮರ್ಪಿಸಲಾಯಿತು.

ಈ ಪುಣ್ಯ ಕ್ಷಣದ ಸಂಪೂರ್ಣ ವಿಡಿಯೋ ವೀಕ್ಷಿಸಿ ನಿಮ್ಮ ವಿಟಿವಿ ವಿಟ್ಲ ಯೂಟ್ಯೂಬ್ ಚಾನೆಲ್ ನಲ್ಲಿ.

ವಿಟ್ಲ ಅರಮನೆಯ ಅರಸರು ಕ್ಷೇತ್ರಕ್ಕೆ ಬಂದು ಪೂಜೆ ಸಲ್ಲಿಸಿದ ಬಳಿಕ, ಪಲ್ಲಕ್ಕಿ ಬಲಿ ಉತ್ಸವ ನಡೆಯಿತು. ಬಲಿ ಉತ್ಸವದ ನಂತರ ಪ್ರಧಾನ ದೇವಿ ಹಾಗೂ ಪರಿವಾರ ಶಕ್ತಿಗಳಿಗೆ ಪೂಜೆ ನೆರವೇರಿದ ನಂತರ ಕಜಂಬು ಹರಕೆಗೆ ಚಾಲನೆ ನೀಡಲಾಯಿತು. ಜಳಕದ ಗುಂಡಿಯಲ್ಲಿ ಸ್ನಾನ ಮಾಡಿಸಿದ ಬಳಿಕ ಗರ್ಭಗುಡಿಯ ಮುಖ್ಯದ್ವಾರದಲ್ಲಿ ಮಕ್ಕಳನ್ನು ದೇವರಿಗೆ ಕಜಂಬು ಹರಕೆ ಮೂಲಕ ಸಮರ್ಪಿಸಲಾಯಿತು. ಆ ನಂತರ ದೇವಸ್ಥಾನದ ನಾಲ್ಕು ಮೂಲೆಗಳಲ್ಲಿ ಕುಳಿತಿರುವ ನಾಲ್ಪೊಳು ಎಂಬ ದೈವಮಾನಿಗಳಿಗೆ ಮುಷ್ಟಿ ಹರಕೆ ಸಲ್ಲಿಸಲಾಯಿತು. ಇಲ್ಲಿಗೆ ಕಜಂಬು ಹರಕೆ ಸಂದಾಯವಾದ0ತಾಗುತ್ತದೆ.

ಜಿಲ್ಲೆ, ಹೊರ ಜಿಲ್ಲೆ ಹಾಗೂ ಸುತ್ತಮುತ್ತಲ ಹತ್ತಾರು ಗ್ರಾಮಗಳ ಸಹಸ್ರಾರು ಮಕ್ಕಳು ಕಜಂಬು ಹರಕೆಗೆ ಸಮರ್ಪಣೆಗೊಂಡರು. ಸುಮಾರು 5 ಸಾವಿರಕ್ಕಿಂತಲು ಹೆಚ್ಚಿನ ಭಕ್ತರು ಈ ಹರಕೆ ಜಾತ್ರೋತ್ಸವದಲ್ಲಿ ಭಾಗವಹಿಸಿದ್ದರು. ಕಜಂಬು ಹರಕೆಯ ಬಳಿಕ ಶ್ರೀ ಉಳ್ಳಾಲ್ತಿಗೆ ನೇಮೋತ್ಸವ ನಡೆಯಿತು.

- Advertisement -

Related news

error: Content is protected !!