Thursday, July 23, 2026
spot_imgspot_img
spot_imgspot_img

ಕೇಪು: ಕುದ್ದು ಸ್ಥಳದಲ್ಲೇ ನಿಂತು ಕೋಳಿ ಅಂಕ ಮಾಡಿಸಿದ ಶಾಸಕ ಅಶೋ‌ಕ್‌ ಕುಮಾರ್‌ ರೈ- ಶಾಸಕರು ತೆರಳಿದ ಕೂಡಲೇ ದಾರಿಯಲ್ಲಿ ಹೋಗುತ್ತಿದ್ದ 20 ಜನರ ಬಂಧನ….!

- Advertisement -
- Advertisement -

ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ದೇವಸ್ಥಾನದಲ್ಲಿ ಜಾತ್ರೋತ್ಸವದ ಬಳಿಕ ಇಂದು ಮಧ್ಯಾಹ್ನ ಕೋಳಿ ಅಂಕ ನಡೆಯುತ್ತಿತ್ತು. ಈ ವೇಳೆ ಪೊಲೀಸರು ಸ್ಥಳಕ್ಕೆ ಬಂದು ರೈಡ್ ನಡೆಸಿ ಕೋಳಿ ಅಂಕಕ್ಕೆ ಅಡ್ಡಿಪಡಿಸಿದರು.


ಈ ಹಿನ್ನೆಲೆಯಲ್ಲಿ ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಅವರು ಸ್ಥಳಕ್ಕೆ ಆಗಮಿಸಿ, ಸ್ವತಃ ಅಲ್ಲೇ ನಿಂತು ಕೋಳಿ ಅಂಕವನ್ನು ಸಂಜೆ ಸುಮಾರು 5 ಗಂಟೆಯ ವರೆಗೂ ನಡೆಸಿಕೊಟ್ಟರು.

ನಂತರ ಮಾತನಾಡಿದ ಶಾಸಕರು “ಇಂದು ನಮ್ಮ ಕೋಳಿ ಅಂಕ ಯಶಸ್ವಿಯಾಗಿ ನಡೆದಿದೆ, ಎಲ್ಲರೂ ಈಗ ಮನೆಗೆ ತೆರಳಬೇಕು. ಕಾನೂನಿಗೆ ಗೌರವ ನೀಡುತ್ತಾ ನಾವು ಕಾರ್ಯಕ್ರಮವನ್ನು ನಡೆಸಿದ್ದೇವೆ” ಎಂದು ತಿಳಿಸಿದರು. ಬಳಿಕ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ಶಾಸಕರು ಸ್ಥಳದಿಂದ ತೆರಳಿದ ನಂತರ, ಕೋಳಿ ಅಂಕದಿಂದ ವಾಪಸಾಗುತ್ತಿದ್ದ ಸುಮಾರು 20 ಮಂದಿಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಶಾಸಕ ಅಶೋಕ್ ಕುಮಾರ್ ರೈ ಅವರು ವಿಟ್ಲ ಪೊಲೀಸ್ ಠಾಣೆಗೆ ಭೇಟಿ ನೀಡಿ, ಬಂಧಿತರನ್ನು ತಕ್ಷಣ ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.

ಪೊಲೀಸರು ಹಿಡಿಯುವಾಗ ಹಿರಿಯ ಪೋಲಿಸೋಬ್ಬರಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!