SDMV-ಎ ಮೈರ ತಂಡಗೆ ಪ್ರಶಸ್ತಿ





ಕೇಪು: ಶ್ರೀ ದುರ್ಗಾ ಮಿತ್ರ ವೃಂದ (ರಿ) ಮೈರ- ಕೇಪು ಆಶ್ರಯದಲ್ಲಿ ಮುಕ್ತ ವಾಲಿಬಾಲ್ ಪಂದ್ಯಾಟವು ನವೆಂಬರ್ 16 ರಂದು ಹೊನಲು ಬೆಳಕಿನಲ್ಲಿ ಮೈರ ಶ್ರೀ ದುರ್ಗಾ ರಂಗ ಮಂದಿರ ಕ್ರೀಡಾಂಗಣದಲ್ಲಿ ನಡೆಯಿತು.


“SDMV “ಮೈರ ಎ ತಂಡ 10,000/- ರೂ ನಗದು ಹಾಗೂ SDMV ಟ್ರೋಫಿ, ಪ್ರಥಮ ಸ್ಥಾನವನ್ನು ಪಡೆದರೆ , ದ್ವಿತೀಯ ಬಹುಮಾನ 7,000/- ರೂ ನಗದು ಹಾಗೂ SDMV ಟ್ರೋಫಿ,ಯನ್ನು “ಬ್ರದರ್ಸ್ ಕೇಪು ‘ ಪಡೆಯಿತು. ತೃತೀಯ ಸ್ಥಾನವನ್ನು “ಮೈರ ಟೈಗರ್ಸ್ ” A 4,000/- ರೂ ನಗದು ಹಾಗೂ “ಮೈರ ಟೈಗರ್ಸ್ B ತಂಡ 3000 ರೂ ನಗದು ಹಾಗೂ SDMV ಟ್ರೋಫಿ ಚತುರ್ಥ ಸ್ಥಾನ ಪಡೆಯಿತು.



ಉತ್ತಮ ಎತ್ತುವಿಕೆಗಾರ ಸರ್ಪರಾಜ್, ಉತ್ತಮ ಹೊಡೆತಗಾರ ಸೋನ್ ಶೆಟ್ಟಿ , ಹಾಗೂ ಸವ್ಯಸಾಚಿ ಪ್ರಶಸ್ತಿ ಸುದೀರ್ ಶೆಟ್ಟಿ ಹಾಗೂ ವೈಯಕ್ತಿಕ ಬಹುಮಾನ ( ಲೀಬರೋ ) ಸುಜೀತ್ ಕುಂದಾಪುರ ಇವರಿಗೆ ನೀಡಿ ಗೌರವಿಸಲಾಯಿತು.


ಬೆಳಿಗ್ಗೆ ಧ್ವಜಾರೋಹಣ ನಡೆದು, ಪಂದ್ಯಾಟಕ್ಕೆ ಚಾಲನೆ ನೀಡಿದರು. ಶ್ರೀ ದುರ್ಗಾ ಮಿತ್ರ ವೃಂದ (ರಿ) ಮೈರ- ಕೇಪು ಇದರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪಂದ್ಯಾಟಕ್ಕೆ ಸಹಕಾರವನ್ನು ನೀಡಿದ ಸ್ಪಾನ್ಸರ್‌ಗಳನ್ನು ಗೌರವಿಸಲಾಯಿತು.









