ಕಾಸರಗೋಡು: ಕೇರಳದ ಮೂರು ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ತಿರಸ್ಕøತಗೊಂಡಿದೆ. ತಲಶ್ಶೇರಿ, ಗುರುವಾಯೂರು ಹಾಗೂ ದೇವಿಕುಲಮ್ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತವಾಗಿದೆ.

ಎಪ್ರಿಲ್ 6 ರಂದು ಚುನಾವಣೆ ನಡೆಯಲಿದ್ದು ಕಣ್ಣೂರಿನ ಬಿಜೆಪಿಯ ಜಿಲ್ಲಾಧ್ಯಕ್ಷ ತಲಶೇರಿ ಅಭ್ಯರ್ಥಿ ಎನ್ ಹರಿದಾಸ್, ದೇವಿಕುಲಂನಲ್ಲಿ ಧನಲಕ್ಷ್ಮಿ ಮಾರಿಮುತ್ತು ಮತ್ತು ಗುರುವಾಯೂರಿನಲ್ಲಿ ವಕೀಲೆ ನಿವೇದಿತಾ ಅವರು ನಾಮಪತ್ರ ಸಲ್ಲಿಸಿದ್ದು ಶನಿವಾರ ತಿರಸ್ಕರಿಸಲಾಗಿದೆ.

ನಿವೇದಿತಾ, ಹರಿದಾಸ್, ಧನಲಕ್ಷ್ಮಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸಹಿ ಹೊಂದಿಲ್ಲದ ಕಾರಣ ಹರಿದಾಸ್ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಹರಿದಾಸ್ ಕಣ್ಣೂರಿನಲ್ಲಿ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿದ್ದು, ಕಣ್ಣೂರಿನಲ್ಲಿ ಬಿಜೆಪಿಯ ಭದ್ರಕೋಟೆಗಳಲ್ಲಿ ತಲಶೇರಿ ಕೂಡ ಒಂದಾಗಿದೆ.

2016 ರಲ್ಲಿ ಬಿಜೆಪಿಯ ವಿ.ಕೆ.ಸಜೀವನ್ 22,125 ಮತಗಳನ್ನು ಗಳಿಸಿದ್ದರು. 2016 ರ ತಲಶೇರಿ ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ (ಎಂ) ಅಭ್ಯರ್ಥಿ ಎ ಎನ್ ಶಮೀರ್ ಗೆದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಎ ಪಿ ಅಬ್ದುಲ್ಲಕುಟ್ಟಿಯನ್ನು 34,117 ಮತಗಳ ಅಂತರದಿಂದ ಸೋಲಿಸಿದರು.