Thursday, April 18, 2024
spot_imgspot_img
spot_imgspot_img

ಎರಡನೇ ಅವಧಿಗೆ ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್‌ ಪ್ರಮಾಣ ವಚನ ಸ್ವೀಕಾರ!

- Advertisement -G L Acharya panikkar
- Advertisement -

ಕೇರಳ: ಎರಡನೇ ಅವಧಿಗೆ ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್‌ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ತಿರುವನಂತಪುರದ ಸೆಂಟ್ರಲ್‌ ಸ್ಟೇಡಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್‌ ಖಾನ್‌ ಭೋದಿಸಿದ ಪ್ರಮಾಣವಚನವನ್ನು ಪಿಣರಾಯ್ ವಿಜಯನ್ ಸ್ವೀಕಾರ ಮಾಡಿದ್ದಾರೆ.

76 ವರ್ಷದ ಪಿಣರಾಯ್ ವಿಜಯನ್ 1964 ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್ ವಾದಿ (ಸಿಪಿಎಂ) ಗೆ ಸೇರಿದರು. 2016 ರಲ್ಲಿ ಮೊದಲ ಬಾರಿಗೆ ಕೇರಳದ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಮಾರ್ಕ್ಸ್‌ ವಾದಿ) ಪೊಲಿಟ್‌ ಬ್ಯುರೊ ಸದಸ್ಯರಾಗಿದ್ದ ವಿಜಯನ್ ಅವರು 1998 ರಿಂದ 2015 ರವರೆಗೆ ಸಿಪಿಐ (ಎಂ) ಯ ಕೇರಳ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಇ.ಕೆ ನಾಯನಾರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 1996 ರಿಂದ 1998 ರವರೆಗೆ ವಿದ್ಯುತ್ ಮತ್ತು ಸಹಕಾರ ಸಚಿವರಾಗಿಯೂ ಕಾರ್ಯ ನಿರ್ವಹಿಸಿದ್ದರು.

ಕೇರಳದ ಮುಖ್ಯಮಂತ್ರಿಯಾಗಿ ಎರಡನೇ ಅವಧಿಗೆ ಪ್ರಮಾಣ ವಚನವನ್ನು ಸ್ವೀಕರಿಸಿದ ಪಿಣರಾಯ್ ವಿಜಯನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ತಿಳಿಸಿದ್ದಾರೆ.

- Advertisement -

Related news

error: Content is protected !!