Friday, June 5, 2026
spot_imgspot_img
spot_imgspot_img

ಕೇರಳ: ಕುಡಿದ ಮತ್ತಿನಲ್ಲಿ ಫೋಟೊ ತೆಗೆಸಿಕೊಳ್ಳುವಾಗ ಕುತ್ತಿಗೆಗೆ ಸುತ್ತಿಕೊಂಡ ಹೆಬ್ಬಾವು..!

- Advertisement -
- Advertisement -

ಕೇರಳ: ವ್ಯಕ್ತಿಯೋರ್ವ ಕುಡಿದ ಮತ್ತಿನಲ್ಲಿ ಹೆಬ್ಬಾವಿನ ಜೊತೆ ಫೋಟೊ ತೆಗೆಯುವಾಗ ಹೆಬ್ಬಾವು ಆತನ ಕುತ್ತಿಗೆಗೆ ಸುತ್ತಿಕೊಂಡ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ವಳಪಟ್ಟಣಂ ಬಳಿ ನಡೆದಿದೆ.

ಚಂದ್ರನ್ ಎಂಬ ವ್ಯಕ್ತಿಯು ಮದ್ಯದ ಅಮಲಿನಲ್ಲಿದ್ದು, ಹೆಬ್ಬಾವಿನೊಂದಿಗೆ ತನ್ನ ಫೋಟೊ ಕ್ಲಿಕ್ಕಿಸುವಂತೆ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಒತ್ತಾಯಿಸಿದ್ದಾನೆ. ಆದರೆ ಆತ ಕುಡಿದ ಮತ್ತಿನಲ್ಲಿದ್ದ ಕಾರಣ ತಾನೂ ಏನು ಮಾಡುತ್ತೇನೆ ಎಂಬ ಅರಿವು ಆತನಿಗೆ ಇರಲಿಲ್ಲ. ಆತನ ಮೇಲೆ ಇದ್ದ ಹೆಬ್ಬಾವು ಆತನ ಕುತ್ತಿಗೆಗೆ ಸುತ್ತಿಕೊಂಡಿದೆ.

ಆ ವೇಳೆ ಆತ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ಸಂದರ್ಭ ಪೆಟ್ರೋಲ್ ಬಂಕ್ ಸಿಬ್ಬಂದಿ ಗೋಣಿ ಚೀಲ ತಂದು ಹೆಬ್ಬಾವನ್ನು ಗೋಣಿಗೆ ತುಂಬಿಸಲು ಪ್ರಯತ್ನಿಸಿದರು ಆಗ ಹೆಬ್ಬಾವು ಓಡಿದೆ. ಪರಿಸ್ಥಿತಿ ಗಂಭೀರವಾದರಿಂದ ಆತ ಅಲ್ಲೇ ಬಿದ್ದುಬಿಟ್ಟ ಎಂದು ಪೆಟ್ರೋಲ್ ಬಂಕ್ ಸಿಬ್ಬಂದಿ ಅಭಿಷೇಕ್ ಹೇಳಿದ್ದಾರೆ.

- Advertisement -

Related news

error: Content is protected !!