


ಕೇಪು: ನವಜನ್ಯ ಮಿತ್ರವೃಂದ (ರಿ.),ಕುಕ್ಕೆಬೆಟ್ಟು ಇದರ ಆಶ್ರಯದಲ್ಲಿ “ಕೆಸರ್‌ಡೊಂಜಿ ದಿನ” ಕಾರ್ಯಕ್ರಮವು ಜುಲೈ. 20-07-2025ನೇ ಆದಿತ್ಯವಾರ ಬೆಳಗ್ಗೆ 9:00 ಗಂಟೆಗೆ ಕೇಪು, ಕುಕ್ಕೆಬೆಟ್ಟು ಮಿತ್ರವೃಂದದ ಎದುರು ಗದ್ದೆಯಲ್ಲಿ ನಡೆಯಲಿದೆ.
ಜಿನಚಂದ್ರ ಜೈನ್, ಕುಕ್ಕೆಬೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕೇಪು ಗ್ರಾಮ ಪಂಚಾಯತ್ ಸದಸ್ಯ ಜಗಜೀವನ್ ರಾಮ್ ಶೆಟ್ಟಿ ಮೈರ, ಕೇಪು ಗ್ರಾಮ ಪಂಚಾಯತ್ ಸದಸ್ಯ ಪುರುಷೋತ್ತಮ ಗೌಡ ಕಲ್ಲಂಗಳ, ಕೇಪು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಮೋಹಿನಿ ಕುಕ್ಕೆಬೆಟ್ಟು, ಕೇಪು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ವಿಶಾಲಾಕ್ಷಿ ಅತಿಕ್ರಾಯಬೈಲು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸಂಜೆ 4:00 ಗಂಟೆಗೆ ನಡೆಯುವ ಸಮಾರೋಪ ಕಾರ್ಯಕ್ರಮದಲ್ಲಿ ಕೃಷ್ಣಯ್ಯ ಕೆ ವಿಟ್ಲ ಆರಮನೆ, ಮನೋಜ್ ಪಿ. ಕ್ರಶರ್, ಪರಪಾದೆ, ಕೇಪು ಗ್ರಾಮ ಪಂಚಾಯತ್ ಅಧ್ಯಕ್ಷ ರಾಘವ ಮಣಿಯಾಣಿ ಸಾರಡ್ಕ, ರಾಜೀವ ಭಂಡಾರಿ ಮಣಿಪದವು, ಕುಂಡಕೋಳಿ, ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, ಬಾಲಕೃಷ್ಣ ಶೆಟ್ಟಿ ಬೇಂಗ್ರೋಡಿ, ಬಾಲಚಂದ್ರ ನಾಯಕ್ ಕಟ್ಟೆ, ಸುಧಾಕರ ಪೂಚಾರಿ ಬಡೆಕ್ಕೋಡಿ, ರಾಜೇಶ್ ಉಕ್ಕುಡ, ಮುನೀರ್ ದರ್ಭೆ, ರಮೇಶ ವರಪ್ಪಾದೆ ದುರ್ಗಾಂಬಾ, ಪ್ರಭಾಕರ ಶೆಟ್ಟಿ ಪಡಿಬಾಗಿಲು, ಇಬ್ರಾಯಿಂ ಕುಕ್ಕೆಬೆಟ್ಟು, ಕೇಪು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಸ್ಪರ್ಧೆಗಳು:
ಅಂಗನವಾಡಿ ಮಕ್ಕಳಿಗೆ, LKG & UKG
*ಬಕೆಟ್‌ಗೆ ಬಾಲ್
*ಬಕೆಟಿಗೆ ನಾಣ್ಯ
*ಲಕ್ಕಿಗೇಮ್
*ಕಪ್ಪೆ ಜಿಗಿತ
1ರಿಂದ 4ನೇ ತರಗತಿ
ಹುಡುಗರು ಮತ್ತು ಹುಡುಗಿಯರು ಒಟ್ಟಿಗೆ
*50ಮೀ. ಓಟ
*ಲಕ್ಕಿಗೇಮ್
*ವಾಲಿಬಾಲ್ ಎಸೆತ
*ಕಪ್ಪೆ ಜಿಗಿತ
5ರಿಂದ 7ನೇ ತರಗತಿ ಹುಡುಗರು
*100ಮೀ. ಓಟ
*ವಾಲಿಬಾಲ್ ಎಸೆತ
*ಗೂಟ ಓಟ
*ಹಾಳೆ ಓಟ (2ಜನ)
5ರಿಂದ 7ನೇ ತರಗತಿ ಹುಡುಗಿಯರು
*100ಮೀ. ಓಟ
*ವಾಲಿಬಾಲ್ ಎಸೆತ
*ಲಕ್ಕಿಗೇಮ್
*ಗೂಟ ಓಟ
8ರಿಂದ 10ನೇ ತರಗತಿ ಹುಡುಗರು
*100 ಮೀ. ಓಟ
*ಗೂಟ ಓಟ
*ವಾಲಿಬಾಲ್ ಎಸೆತ
*ಎದುರು ಬದುರು ಓಟ (2 ಜನ)
*ಹಗ್ಗ-ಜಗ್ಗಾಟ (5 ರಿಂದ 10ಜನ )
8ರಿಂದ 10ನೇ ತರಗತಿ ಹುಡುಗಿಯರು
*100 ಮೀ. ಓಟ
*ಗೂಟ ಓಟ
*ಲಿಂಬೆ ಚಮಚ
*ಹಗ್ಗ-ಜಗ್ಗಾಟ (5 ರಿಂದ 10)
ಮಹಿಳೆಯರಿಗೆ
*ತೆಂಗಿನಕಾಯಿ ಎಸೆತ
*ಗೂಟ ಓಟ
*ಲಿಂಬೆ ಚಮಚ ಓಟ
*ಲಕ್ಕಿಗೇಮ್
*ಹಗ್ಗಜಗ್ಗಾಟ
ಪುರುಷರಿಗೆ
*ಕೆಸರು ಈಜು ಸ್ಪರ್ಧೆ
*ಗೂಟ ಓಟ
*ಎದುರು ಬದುರು ಓಟ (2 ಜನ)
*ಹಾಳೆ ಓಟ (2 ಜನ)
*ತೆಂಗಿನಕಾಯಿ ಎಸೆತ
*ಹಗ್ಗಜಗ್ಗಾಟ
ವಿಶೇಷ ಆಕರ್ಷಣೆ ಕ್ರೀಡೆ
*ದಂಪತಿಗಳ ಓಟ
*ನಿಧಿಶೋಧ (ಚಿನ್ನ + ಬೆಳ್ಳಿ + ಅಕ್ಕಿ)
*50 ವರ್ಷ ಮೇಲ್ಪಟ್ಟವರ ಓಟ.
*ತಪ್ಪಂಗಾಯಿ
ವಿಶೇಷ ಸೂಚನೆ :
*ಹಗ್ಗಜಗ್ಗಾಟದ ಎಲ್ಲಾ ತಂಡಗಳನ್ನು ಸ್ಥಳದಲ್ಲಿಯೇ ರಚಿಸಲಾಗುತ್ತದೆ.
*ಮಧ್ಯಾಹ್ನದ ಊಟದ ವ್ಯವಸ್ಥೆ ಇರುತ್ತದೆ.
*ಅಂಗನವಾಡಿ, LKG & UKG ಮಕ್ಕಳ ಕ್ರೀಡೆಗಳನ್ನು ಮೈದಾನದಲ್ಲಿ ಮಾಡಲಾಗುವುದು.
*ಸಂಘಟಕರ ತೀರ್ಮಾನದ ಮೇರೆಗೆ ಮುಂದಿನ ಕ್ರೀಡೆಗಳು.
*ಸಣ್ಣ ಮಕ್ಕಳ ಜವಾಬ್ದಾರಿಯನ್ನು ಪೋಷಕರೇ ವಹಿಸತಕ್ಕದ್ದು.








