Friday, May 23, 2025
spot_imgspot_img
spot_imgspot_img

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಕೇಸ್: ಮತ್ತೆ 84 ಆರೋಪಿಗಳು ಅರೆಸ್ಟ್

- Advertisement -
- Advertisement -

ಬೆಂಗಳೂರು: ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಗಲಭೆ ಕೇಸ್ ಗೆ ಸಂಬಂಧಿಸಿ ಮತ್ತೆ 84 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಲ್ಲಿ ಗಲ್ಲಿಯಲ್ಲೂ ಬಿಡದೇ ಕಾರ್ಯಾಚರಣೆ ನಡೆಸಿದ ಖಾಕಿಪಡೆ ಡಿಜೆ ಹಳ್ಳಿಯಲ್ಲಿ 34 ಆರೋಪಿಗಳು ಹಾಗೂ ಕೆಜಿ ಹಳ್ಳಿಯಲ್ಲಿ 50 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಈರವೆರಗೆ ಒಟ್ಟು 290 ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನಿನ್ನೆ ತಡರಾತ್ರಿ ಕೂಡ ಎಸಿಪಿ ರವಿಪ್ರಸಾದ್ ನೇತೃತ್ವದಲ್ಲಿ ಕಾರ್ಯಾಚರಣೆಗಿಳಿದ ಪೊಲೀಸರು ಗಲ್ಲಿ ಗಲ್ಲಿಯಲ್ಲೂ ಹುಡುಕಿ ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆಯ ವಿಡಿಯೋಗಳನ್ನು ಪರಿಶೀಲಿಸಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪೊಲೀಸರ ಕಣ್ತಪ್ಪಿಸಲು ಮೊಬೈಲ್ ಡೇಟಾ ಡಿಲೀಟ್ ಮಾಡಿದ್ದ ಆರೋಪಿಗಳ ಮೊಬೈಲ್ ರಿಕವರಿ ಮಾಡಲು ಟೆಕ್ನಿಕಲ್ ಟೀಂಗೆ ಕಳುಹಿಸಲಾಗಿದೆ. ಇದರ ಜತೆಗೆ ಗ್ರೂಪ್ ಗಳಿಂದ ಎಕ್ಸಿಟ್ ಆಗಿರುವವರನ್ನು ಪತ್ತೆ ಹಚ್ಚಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!