ಬೆಂಗಳೂರು: ನಿನ್ನೆ ರಾತ್ರಿ ಕೆ.ಜಿ.ಹಳ್ಳಿ ಹಾಗೂ ಡಿ.ಜೆ ಹಳ್ಳಿ ಗಲಭೆ ಕಿಚ್ಚು ಜೋರಾಗಿತ್ತು. ಆದ್ರೆ ಈ ಎಲ್ಲ ಘಟನೆಗೆ ಕಾರಣ ನವೀನ್ ಎಂಬಾತ ಹಾಕಿದ್ದ ಆ ಒಂದೇ ಒಂದು ಫೇಸ್ ಬುಕ್ ಪೋಸ್ಟ್.
ಇಂಟರ್ ನೆಟ್ ನಲ್ಲಿದ್ದ ಪೋಸ್ಟ್ ಡೌನ್ ಲೋಡ್ ಮಾಡಿದ್ದ ನವೀನ್ ಅದನ್ನು ಫೇಸ್ ಬುಕ್ ನಲ್ಲಿ ಹಾಕಿದ್ದ. ಇದನ್ನು ಸ್ಕ್ರೀನ್ ಶಾಟ್ ತೆಗೆದುಕೊಂಡ ಎಸ್ ಡಿ ಪಿಐ ಕಾರ್ಯದರ್ಶಿ ಮುಜಾಮಿಲ್, ಫೇಸ್ ಬುಕ್ ಪೋಸ್ಟ್ ನ ಸ್ಕ್ರೀನ್ ಶಾಟ್ ತೆಗೆದು ಸೋಶಿಯಲ್ ಮೀಡಿಯಾಗಳಿಗೆ ಹರಿಬಿಟ್ಟಿದ್ದ ಎಂಬ ಆರೋಪ ಕೇಳಿಬಂದಿದೆ.
ಇದರ ಜತೆಗೆ ನವೀನ್, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಅಕ್ಕನ ಮಗ ಎಂದು ಶೇರ್ ಮಾಡಿದ್ದ. ಇದು ಸ್ಥಳೀಯ ಎಸ್ ಡಿ ಪಿಐ ಯುವಕರು ರೊಚ್ಚಿಗೇಳಲು ಕಾರಣ ಎನ್ನಲಾಗಿದೆ. ತನ್ನ ಬೆಂಬಲಿಗರಿಗೆ ಗಲಾಟೆ ನಡೆಸಲು ಕುಮ್ಮಕ್ಕು ನೀಡಿದ್ದಾನೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಮುಜಾಮಿಲ್ ಗಲಾಟೆ ನಡೆಸಲು ಕಾರಣ ಏನಿರಬಹುದು..?
ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಆ ಭಾಗದ ಮುಸ್ಲಿ ಮುಖಂಡರು ಆಪ್ತರು. ಹೀಗಾಗಿ ಇದನ್ನು ಬದಲಾಯಿಸಲು ಅಲ್ಲಿನ ಎಸ್ ಡಿ ಪಿಐ ಕಾಯುತ್ತಿತ್ತು ಎನ್ನಲಾಗಿದೆ. ಹಲವು ಬಾರಿ ಮಾತನಾಡಿದ್ರೂ ಶ್ರೀನಿವಾಸ ಮೂರ್ತಿ ಅವರಿಗೆ ಬೆಂಬಲ ನೀಡುವುದನ್ನು ಮುಸ್ಲಿಂ ಮುಖಂಡರು ಬಿಡಲಿಲ್ಲ. ಹೀಗಾಗಿ ಈ ಸಮಯವನ್ನು ತನ್ನ ಲಾಭಕ್ಕಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.