ಚಿತ್ರರಂಗದಲ್ಲಿ ದಾಖಲೆ ಮಾಡಿದ ಸಿನಿಮಾ ಕೆಜಿಎಫ್. ಹೀಗಾಗಿ ಕೆಜಿಎಫ್ ಚಾಪ್ಟರ್-2 ಹೇಗಿರಲಿದೆ ಅನ್ನೋ ಕುತೂಹಲ ಸಿನಿರಸಿಕರಲ್ಲಿ ಹೆಚ್ಚಾಗಿದೆ. ಈ ನಡುವೆ ಚಿತ್ರತಂಡ ಕೆಜಿಎಫ್ ಚಾಪ್ಟರ್-2 ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದ ಅಧೀರನ ಹೊಸ ಲುಕ್ ಅನಾವರಣಗೊಂಡಿದ್ದು, ಈ ಪಾತ್ರ ಹೇಗಿರಲಿದೆ ಎನ್ನುವ ಚಿಕ್ಕ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ.
ಇಂದು ಸಂಜಯ್ ದತ್ತ್ ಹುಟ್ಟುಹಬ್ಬ. ಈ ಹಿನ್ನಲೆಯಲ್ಲಿ ಕೆಜಿಎಫ್-2 ಚಿತ್ರದಲ್ಲಿ ಖಳನಾಯಕನಾಗಿ ನಟಿಸುತ್ತಿರುವ ಸಂಜಯ್ ದತ್ತ್ ನ ಹೊಸ ಅವತಾರ ರಿಲೀಸ್ ಆಗಿದೆ. ಹೊಂಬಾಳೆ ಫಿಲಂಸ್ ಅಧೀರನ ಪೋಸ್ಟರ್ ಅನ್ನು ಬಿಡುಗಡೆ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.
‘ADHEERA’ – Inspired by the brutal ways of the vikings ?
— Hombale Films (@hombalefilms) July 29, 2020
Happy Birthday @duttsanjay sir.#KGFChapter2 #AdheeraFirstLook@VKiragandur @TheNameIsYash @prashanth_neel@SrinidhiShetty7 @TandonRaveena @Karthik1423 @excelmovies @ritesh_sid @AAFilmsIndia @FarOutAkhtar @VaaraahiCC pic.twitter.com/IJEHw7V3dj
ಅಧೀರ ಖಡ್ಗವನ್ನು ತಲೆಗೆ ಒತ್ತಿ ಹಿಡಿದ್ದು, ಏನೋ ಯೋಚಿಸುವ ರೀತಿಯಲ್ಲಿ ಕುಳಿತಿದ್ದಾನೆ. ಆತನ ಮುಖದ ಮೇಲೆ ದೇವನಾಗರಿ ಲಿಪಿಯಲ್ಲಿ ಬರೆಯಲಾಗಿದೆ. ಅಧೀರನ ಹೊಸ ಲುಕ್ ಗೆ ಸಿನಿ ಪ್ರಿಯರು ಫಿದಾ ಆಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ದುಪ್ಪಟ್ಟಾಗಿದೆ.