Tuesday, July 23, 2024
spot_imgspot_img
spot_imgspot_img

ಬಂಟ್ವಾಳ : ಭಜನ ಮಂದಿರ ಹಾಗೂ ಶಿಶು ಮಂದಿರಕ್ಕೆ ನುಗ್ಗಿ ನಗದು ಕಳವುಗೈದ ಖದೀಮರು

- Advertisement -G L Acharya panikkar
- Advertisement -

ಬಂಟ್ವಾಳ : ನರಿಕೊಂಬು ಗ್ರಾಮದಲ್ಲಿರುವ ಭಜನ ಮಂದಿರ ಹಾಗೂ ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರಕ್ಕೆ ಯಾರೋ ಕಳ್ಳರು ನುಗ್ಗಿ ನಗದು ಕಳವುಗೈದ ಘಟನೆ ನಡೆದಿದೆ.

ನರಿಕೊಂಬು ಗ್ರಾಮದಲ್ಲಿರುವ ಭಜನ ಮಂದಿರ ಹಾಗೂ ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದ ಕಮಿಟಿಯ ಸದಸ್ಯ ಕಿಶೋರ್ ಶೆಟ್ಟಿ ಎಂಬವರು ದಿನಾಂಕ: 24.06.2024 ರಂದು ಬೆಳಿಗ್ಗೆ ಮಂದಿರಕ್ಕೆ ಹೋದಾಗ, ಮಂದಿರದ ಮುಂಬಾಗಿಲಿನ ಲಾಕನ್ನು ಮುರಿದು, ಯಾರೋ ಕಳ್ಳರು ಒಳ ಪ್ರವೇಶಿಸಿ ಮಂದಿರದ ಮುಂಭಾಗದ ಹಾಲ್ ನಲ್ಲಿಟ್ಟಿದ್ದ ಕಾಣೆಕೆ ಡಬ್ಬಿಗೆ ಹಾಕಿದ ಬೀಗವನ್ನು ಮುರಿದು ಕಾಣಿಕೆ ಡಬ್ಬಿಯಲ್ಲಿದ್ದ ನಗದು ಹಣವನ್ನು ಕಳವು ಮಾಡಿರುವುದು ಕಂಡುಬಂದಿದ್ದು, ಮಂದಿರಕ್ಕೆ ಸಂಬಂಧಿಸಿದ ಕಛೇರಿಯ ಬೀಗವನ್ನು ಮುರಿದು ಗೊಡ್ರೆಜ್ ನ ಬಾಗಿಲನ್ನು ತೆರೆದು, ಅದರಲ್ಲಿದ್ದ ಸೊತ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿ, ಗೊಡ್ರೆಜ್ ನಲ್ಲಿದ್ದ ರೂ 3,000/- ರೂಪಾಯಿ ನಗದು ಹಣವನ್ನು ಕಳವು ಮಾಡಿರುವುದಾಗಿದೆ.
ಪ್ರಕರಣ ಮುಂದುವರಿದಂತೆ ಕೊಪ್ಪಳಕೋಡಿ ಎಂಬಲ್ಲಿರುವ ಶಿಶು ಮಂದಿರದ ಬಾಗಿಲನ್ನೂ ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ, ಮಂದಿರದೊಳಗಿದ್ದ ಕಾಣಿಕೆ ಡಬ್ಬಿಯಲ್ಲಿದ್ದ ಅಂದಾಜು 600/- ರೂಪಾಯಿ ನಗದು ಹಣವನ್ನು ಕಳವು ಮಾಡಿದ್ದು, ಆಫೀಸು ರೂಮ್ ನಲ್ಲಿದ್ದ ಗೊಡ್ರೆಜ್ ಗಳ ಸೊತ್ತುಗಳನ್ನು ಚಿಲ್ಲಾಪಿಲ್ಲಿ ಮಾಡಿರುತ್ತಾರೆ.

ದಿನಾಂಕ: 23.06.2024 ರಂದು ಸಂಜೆಯಿಂದ ದಿನಾಂಕ: 24.06.2024 ರಂದು ಬೆಳಿಗ್ಗಿನ ಅವಧಿಯಲ್ಲಿ ಅಪರಿಚಿತ ಕಳ್ಳರು ಸದ್ರಿ ಸ್ಥಳಗಳಿಂದ ಒಟ್ಟು 3,600/- ರೂಪಾಯಿಯನ್ನು ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ಅ.ಕ್ರ:- 110/2024 ಕಲಂ: 457, 380 ಐಪಿಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!