Friday, June 5, 2026
spot_imgspot_img
spot_imgspot_img

ಪುತ್ತೂರು: ಬಜರಂಗದಳ ಕೆಯ್ಯೂರು ಘಟಕದ ಸುರಕ್ಷಾ ಪ್ರಮುಖ್ ನೇಣಿಗೆ ಶರಣು

- Advertisement -
- Advertisement -

ಪುತ್ತೂರು: ಬಜರಂಗದಳ ಕೆಯ್ಯೂರು ಘಟಕದ ಸುರಕ್ಷಾ ಪ್ರಮುಖ್ ಸಚಿನ್ ಯು(27ವ) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೆಯ್ಯೂರು ಗ್ರಾಮದ ಉದ್ದಳೆ ನಿವಾಸಿಯಾಗಿರುವ ಕುಶಾಲಪ್ಪ ಗೌಡ ಮತ್ತು ಪದ್ಮಾವತಿ ದಂಪತಿಗಳ ಪುತ್ರನಾಗಿರುವ ಸಚಿನ್ ಕೆಯೂರು ಗ್ರಾಮದ ಪಂಚಾಯತ್ ಸಮೀಪ ಗೇರು ಮರವೊಂದಕ್ಕೆ ಕೇಸರಿ ಶಾಲು ಬಿಗಿದು ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ,

ಮೃತರು ತಂದೆ ತಾಯಿ, ಇಬ್ಬರು ಅಕ್ಕಂದಿರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!