Friday, June 5, 2026
spot_imgspot_img
spot_imgspot_img

ಮದುವೆಗೆ ಒಪ್ಪದ ಶಿಕ್ಷಕಿಯ ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ ಸೇರೆ..!

- Advertisement -
- Advertisement -

ಹಾಸನ: ಮದುವೆಗೆ ಒಪ್ಪದ ಶಿಕ್ಷಕಿಯನ್ನು ಅಪಹರಣ ಮಾಡಿದ ಘಟನೆ ಹಾಸನ ಹೊರವಲಯದ ಬಿಟ್ಟಗೌಡನಹಳ್ಳಿಯ ಬಳಿ ನಡೆದಿದೆ.

ಅಪಹರಣ ಮಾಡಿದ ವ್ಯಕ್ತಿ ರಾಮು ಮತ್ತು ಅಪರಹರಣಕ್ಕೊಳಗಾದ ಶಿಕ್ಷಕಿ ಅರ್ಪಿತಾ ಎಂದು ಗುರುತಿಸಲಾಗಿದೆ.

ಶಾಲೆಗೆ ಹೋಗುತ್ತಿರುವ ಸಂದರ್ಭದಲ್ಲಿ ಕಾರ್​ನಲ್ಲಿ ಬಂದು ಬಲವಂತವಾಗಿ ಎಳೆದೊಯ್ದಿದ್ದಾರೆ. ಅರ್ಪಿತಾ ಅವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವ ದೃಶ್ಯಗಳು ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಅರ್ಪಿತಾ ಸಂಬಂಧಿ ರಾಮು ಎಂಬಾತನೇ ಅಪಹರಣ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಮದುವೆಗೆ ಅರ್ಪಿತಾ ಮತ್ತು ಕುಟುಂಬಸ್ಥರು ಒಪ್ಪದ ಹಿನ್ನೆಲೆ ಅಪಹರಣ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಹಾಸನ ಎಸ್​ಪಿ ಮೊಹಮ್ಮದ್ ಸುಜಾತಾ ಬಂದಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಅರ್ಪಿತಾ ರಕ್ಷಣೆಗೆ ಪೊಲೀಸರು ಮುಂದಾಗಿದ್ದಾರೆ.

ಅರ್ಪಿತಾ ತಾಯಿಯ ಕಣ್ಣೀರು ರಾಮು ಎಂಬವನೇ ಮಗಳನ್ನು ಕಿಡ್ನ್ಯಾಪ್ ಮಾಡಿದ್ದಾನೆ. ಆತ ನಮ್ಮ ಚಿಕ್ಕಮನ ಮಗನಾಗಿದ್ದು, 15 ದಿನಗಳ ಹಿಂದೆ ಅಪ್ಪ-ಅಮ್ಮನ ಜೊತೆ ಬಂದಿದ್ದನು. ಮದುವೆ ಮಾಡಿಕೊಡಿ ಎಂದು ಹೇಳಿದ್ದರು. ಆದ್ರೆ ಮಗಳು ಒಪ್ಪದ ಹಿನ್ನೆಲೆ ನಾವು ಮದುವೆಗೆ ನಿರಾಕರಿಸಿದ್ದೇವೆ ಎಂದು ಅರ್ಪಿತಾ ತಾಯಿ ಹೇಳಿದ್ದಾರೆ. ಮದುವೆಗೆ ಒಪ್ಪದ ಹಿನ್ನೆಲೆ ಅಂದಿನಿಂದ ಕಿರುಕುಳ ನೀಡಲು ಆರಂಭಿಸಿದ್ದರು. ಇದೀಗ ಮಗಳನ್ನ ಅಪಹರಿಸಿದ್ದಾರೆ. ಆದಷ್ಟು ಬೇಗ ಮಗಳನ್ನು ರಕ್ಷಿಸಿಕೊಡಿ ಎಂದು ಅರ್ಪಿತಾ ಕಣ್ಣೀರು ಹಾಕಿದರು.

- Advertisement -

Related news

error: Content is protected !!