Sunday, May 5, 2024
spot_imgspot_img
spot_imgspot_img

ಪೊಲೀಸ್ ಇನ್ ಫಾರ್ಮರ್ ಎಂದು ಪೊಲೀಸರಿಗೆಯೇ ವಂಚನೆ ಮಾಡ್ತಿದ್ದ ಕಿಲಾಡಿ ಸಿಸಿಬಿ ಬಲೆಗೆ

- Advertisement -G L Acharya panikkar
- Advertisement -

ಬೆಂಗಳೂರು: ಪೊಲೀಸ್ ಇನ್ ಫಾರ್ಮರ್ ಎಂದು ಹೇಳಿಕೊಂಡು ಪೊಲೀಸರಿಗೆಯೇ ವಂಚನೆ ಮಾಡಿ ಅವರ ದುಡ್ಡಿನಲ್ಲಿಯೇ ಮೋಜು ಮಸ್ತಿ ಮಾಡುತ್ತಿದ್ದ ಖತರ್ನಾಕ್ ಕಿಲಾಡಿ ಸದ್ಯ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕಳೆದ ನಾಲ್ಕು ವರ್ಷದಿಂದ ಪೊಲೀಸರಿಗೆ ವಂಚಿಸಿ ಪಬ್ ಬಾರ್​ಗಳಲ್ಲಿ ಮೋಜುಮಸ್ತಿ ಮಾಡುತ್ತಿದ್ದ ವಸೀಂ ಎಂಬ ಆರೋಪಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಆರೋಪಿ ವಸೀಂ, ಪೊಲೀಸರ ಜೊತೆಯಲ್ಲಿ ಇದ್ದುಕೊಂಡು ಅವರಿಗೆ ಸಹಾಯ ಮಾಡುವಂತೆ ಅವರ ಬಳಿಯಿಂದಲೇ ಹಣ ಪಡೆದು ವಂಚಿಸಿದ್ದಾನೆ. ಅಲ್ಲಿ ಇಲ್ಲಿ ಸುತ್ತಾಡುತ್ತ ಮೋಜು ಮಸ್ತಿ ಮಾಡುತ್ತ ಜೀವನ ನಡೆಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಲ್ಲೊಂದು ದಂಧೆ ನಡೀತಿದೆ, ನಾನು ಅಲ್ಲಿಗೆ ಹೋಗಿ ಲೊಕೇಶನ್ ಕಳಿಸುತ್ತೇನೆ, ದಂಧೆಯಲ್ಲಿ ಏನೇನು ನಡೆಯುತ್ತೆ ಎಂದು ಮಾಹಿತಿ ನೀಡುತ್ತೇನೆ ಎಂದು ಪೊಲೀಸರಿಗೆ ಆರೋಪಿ ವಸೀಂ ನಂಬಿಸುತ್ತಿದ್ದ. ಪೊಲೀಸರು ಈಗಲೇ ಬರುತ್ತೇವೆ ಅಂದರೆ ಬೇಡ ನಾನು ಅಲ್ಲಿಗೆ ಹೋಗಿ ಸ್ಪಾಟ್ ಲೊಕೇಶನ್ ಕಳಿಸುತ್ತೇನೆ ಅಂತಿದ್ದ. ಸರ್ ಆಟೋ ತೊಂದರೆ ಆಗಿದೆ, ಪೆಟ್ರೋಲ್ ಬೇಕಿತ್ತು, ಬೈಕ್ ಇಲ್ಲ. ಮನೆಯಲ್ಲಿ ಸಮಸ್ಯೆ ಎಂದು ನಂಬಿಸಿ ಎರಟು, ಮೂರು ಸಾವಿರ ಫೋನ್ ಪೇ ಮಾಡಿ ಅಂತಿದ್ದ. ಇದನ್ನು ನಂಬಿ ಪೊಲೀಸರು ಹಣ ಹಾಕಿದ್ದು, ಹಣ ಬಂದ ಕೆಲವೇ ಕ್ಷಣಗಳಲ್ಲಿ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿತ್ತಿದ್ದ. ಹೀಗೆ ಹಲವು ಸಿಸಿಬಿ ಹಾಗೂ ಲಾ ಆಂಡ್ ಆರ್ಡರ್ ಪೊಲೀಸರಿಗೆ ಆರೋಪಿ ವಸೀಂ ಯಾಮಾರಿಸಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.

- Advertisement -

Related news

error: Content is protected !!