ಹುಬ್ಬಳ್ಳಿ: ಬಿವಿಬಿ ಕಾಲೇಜು ಆವರಣದಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಫಯಾಜ್ ತಾಯಿ ರಾಜ್ಯದ ಜನರ ಮತ್ತು ಸಂತ್ರಸ್ತೆಯ ಪೋಷಕರ ಕ್ಷಮೆ ಕೇಳಿದ್ದಾರೆ. ಆದರೆ ಫಯಾಜ್ ಕುಟುಂಬದವರ ವಿರುದ್ಧ ನೆಹಾ ತಂದೆ ನಿರಂಜನ ಹಿರೇಮಠ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ಹಾಗೂ ನೇಹಾಳನ್ನು ಪ್ರೀತಿಸುತ್ತಿದ್ದ ವಿಚಾರ ಮೊದಲೇ ತಿಳಿಸಬಹುದಿತ್ತಲ್ಲವೇ? ಒಂದು ವೇಳೆ ಮೊದಲೇ ಈ ವಿಷಯ ತಿಳಿಸಿದ್ದರೆ ನಾವು ಎಚ್ಚೆತ್ತುಕೊಂಡು ಮಗಳ ರಕ್ಷಣೆ ಮಾಡುತ್ತಿದ್ದೆವಲ್ಲವೇ? ಅದರ ಬದಲು ಈಗ ಕ್ಷಮೆ ಕೇಳುತ್ತಿದ್ದೇನೆ ಎಂದರೆ ಏನು ಪ್ರಯೋಜನ? ಎಂದು ತಮ್ಮ ಮಗಳ ಸಾವಿಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇವಲ ಕ್ಷಮೆ ಕೇಳುವುದರಿಂದ ಏನೂ ಉಪಯೋಗವಿಲ್ಲ. ಫಯಾಜ್ ಅನ್ನು ಜಾಮೀನು ಕೊಡಿಸಿ ಕರೆದುಕೊಂಡು ಬಂದು ನಮ್ಮ ಮಗಳನ್ನು ಹತ್ಯೆ ಮಾಡಿದ ರೀತಿಯಲ್ಲಿ ಬರ್ಬರವಾಗಿ ಕೊಲೆ ಮಾಡಿ. ಅಲ್ಲವಾದಲ್ಲಿ ನೇಣಿಗೇರಿಸಿ. ಆಗ ಮಾತ್ರ ಮಗಳ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ. ಅದು ಬಿಟ್ಟು ಕ್ಷಮೆ ಎಂದರೆ ಏನು ಉಪಯೋಗವಿಲ್ಲ ಎಂದು ಹಿರೇಮಠ ವಾಗ್ದಾಳಿ ನಡೆಸಿದ್ದಾರೆ.