Friday, April 26, 2024
spot_imgspot_img
spot_imgspot_img

ಕೆಕೆಆರ್ ನಾಯಕತ್ವ ಬಿಟ್ಟುಕೊಟ್ಟ ದಿನೇಶ್ ಕಾರ್ತಿಕ್

- Advertisement -G L Acharya panikkar
- Advertisement -

ಕೋಲ್ಕತ್ತಾ: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಉತ್ತಮ ಪ್ರದರ್ಶನ ತೋರುತ್ತಿರುವ ಸಂದರ್ಭದಲ್ಲೇ ನಾಯಕ ದಿನೇಶ್ ಕಾರ್ತಿಕ್ ನಾಯಕತ್ವ ಸ್ಥಾನದಿಂದ ಕೆಳಗಿಳಿದಿದ್ದಾರೆ. ಕೆಕೆಆರ್ ತಂಡದ ನೂತನ ನಾಯಕನಾಗಿ ಇಯಾನ್ ಮೋರ್ಗನ್ ಅವರು ಸ್ಥಾನ ಅಲಂಕರಿಸಿದ್ದಾರೆ.

ನಾಯಕತ್ವದ ಜವಾಬ್ದಾರಿ ಹೊತ್ತಿರುವ ಕಾರಣ ಬ್ಯಾಟಿಂಗ್ ಕಡೆ ಹೆಚ್ಚಿನ ಗಮನ ಕೊಡಲಾಗುತ್ತಿಲ್ಲ, ಉತ್ತಮ ಗುಣಮಟ್ಟದ ಬ್ಯಾಟಿಂಗ್ ಮಾಡಿ ತಂಡಕ್ಕೆ ಇನ್ನಷ್ಟು ಕೊಡುಗೆ ನೀಡುವ ಉದ್ದೇಶದಿಂದ ನಾಯಕತ್ವವನ್ನು ಅವರು ಬಿಟ್ಟು ಕೊಟ್ಟಿದ್ದಾರೆ ಎಂದು ಕೆಕೆಆರ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಕೆಕೆಆರ್ ತಂಡದಲ್ಲಿ ನಾಯಕತ್ವದ ಬದಲಾವಣೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೇ 4ನೇ ಸ್ಥಾನದಿಂದ ಕೆಳಗೆ ಬಂದರೆ ಮಾರ್ಗನ್ ನಾಯಕತ್ವದ ಮೇಲೆ ಪ್ರಶ್ನೆ ಮೂಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

- Advertisement -

Related news

error: Content is protected !!