Tuesday, April 20, 2021
spot_imgspot_img
spot_imgspot_img

ಸ್ಕ್ರೂ ರೂಪದಲ್ಲಿ ಚಿನ್ನ ಸಾಗಾಟ – ಏರ್ ಪೋರ್ಟ್ ನಲ್ಲಿ ಸಿಕ್ಕಿಬಿದ್ದ ಕಳ್ಳರು

ಕೊಚ್ಚಿ: ಕೋಯಿಕೋಡ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಏರ್​ ಇಂಟೆಲಿಜೆನ್ಸ್ ಘಟಕ, ದುಬೈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರಿಂದ, ಅಕ್ರಮವಾಗಿ ಸಾಗಾಟ ಮಾಡಲಾಗ್ತಿದ್ದ ಚಿನ್ನವನ್ನ ವಶಕ್ಕೆ ಪಡೆದಿದೆ. 365 ಗ್ರಾಂ ತೂಕದ 24 ಕ್ಯಾರೆಟ್​​ನ ಚಿನ್ನ ಇದಾಗಿದ್ದು, ಇದರ ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ಚಿನ್ನವನ್ನ ಪವರ್​ ಬ್ಯಾಂಕ್​​ನಲ್ಲಿ ಹಾಗೂ ಎಲೆಕ್ಟ್ರಿಕ್​​​ ಸ್ವಿಚ್​​ಗಳೊಳಗೆ ಸ್ಕ್ರೂಗಳ ರೂಪದಲ್ಲಿ ಅಡಿಗಿಸಿಟ್ಟು, ತಮ್ಮ ಲಗೇಜ್​​ನಲ್ಲಿ ತೆಗೆದುಕೊಂಡು ಬಂದಿದ್ದರು. ಈ ಬಗ್ಗೆ ಮಾಹಿತಿ ಬಂದಿದ್ದ ಹಿನ್ನೆಲೆ ಕ್ಯಾಲಿಕಟ್​ ಏರ್​ ಇಂಟೆಲಿಜೆನ್ಸ್​ ಘಟಕ ಪರಿಶೀಲನೆ ನಡೆಸಿ, ಚಿನ್ನವನ್ನ ಜಪ್ತಿ ಮಾಡಲಾಗಿದೆ.

- Advertisement -

MOST POPULAR

HOT NEWS

Related news

error: Content is protected !!