Friday, July 11, 2025
spot_imgspot_img
spot_imgspot_img

ವೃದ್ಧೆಯೊಬ್ಬರನ್ನು ನಡುರಸ್ತೆಯಲ್ಲಿ ಬಿಟ್ಟು ಹೋದ ಆಂಬ್ಯುಲೆನ್ಸ್ ಚಾಲಕ!

- Advertisement -
- Advertisement -

ಕೊಡಗು: ಆಂಬ್ಯುಲೆನ್ಸ್ ಚಾಲಕನೋರ್ವ ವೃದ್ಧೆಯನ್ನು ನಡುರಸ್ತೆಯಲ್ಲಿ ಬಿಟ್ಟು ಹೋದ ಆಘಾತಕಾರಿ ಘಟನೆ ಮಡಿಕೇರಿ ಸಮೀಪದ ಐಗೂರು ಗ್ರಾಮದಲ್ಲಿ ನಡೆದಿದೆ.

ವೃದ್ಧೆಯೊಬ್ಬರು ಕೊರೋನಾ ಗೆದ್ದು ಬಂದಿದ್ದು, ಇಂತಹ ವೃದ್ಧೆಯನ್ನು ಗೌರವಯುತವಾಗಿ ಕುಟುಂಬಸ್ಥರಿಗೆ ಮಾಹಿತಿ ನೀಡಿ, ಕಳುಹಿಸಿಕೊಡಬೇಕಾದಂತ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗಳೇ, ಅದ್ಯಾವುದನ್ನು ಪಾಲಿಸಿಲ್ಲ. ಬದಲಾಗಿ, ಆಂಬುಲೆನ್ಸ್ ಚಾಲಕನೊಬ್ಬನನ್ನು ಕರೆದು, ಗಾಡಿ ಹತ್ತಿಸಿ ಕಳುಹಿಸಿದ್ದಾರೆ. ಮಾರ್ಗಮಧ್ಯೆ ಅದೇನ್ ಆಯಿತೋ ಗೊತ್ತಿಲ್ಲ, ಮನೆ ಇನ್ನೂ 2 ಕಿಲೋಮೀಟರ್ ದೂರವಿರುವಾಗಲೇ, ಆಂಬುಲೆನ್ಸ್ ಚಾಲಕ ಆ ವೃದ್ಧೆಯನ್ನು ಸಂಜೆ 5.30ಕ್ಕೆ ರಸ್ತೆ ಮಧ್ಯೆ ಬಿಟ್ಟು ವಾಪಾಸು ಹೋಗಿದ್ದಾರೆ. ಒಂದೆಡೆ ಸೋಂಕಿನಿಂದ ಗುಣಮುಖರಾದರೂ ದೇಹದಲ್ಲಿ ಸುಸ್ತು. ಮತ್ತೊಂದೆಡೆ ಈ ಸುಸ್ತಿನ ನಡುವೆಯೂ ಮನೆಗೆ 2 ಕಿಲೋಮೀಟರ್ ನಡೆದುಕೊಂಡು ಹೋಗಲಾರದೇ ರಸ್ತೆಯಲ್ಲೇ ಪರದಾಡಿದ ಅಮಾನವೀಯ ಘಟನೆ ಕೊಡಗಿನಲ್ಲಿ ನಡೆದಿದೆ.

ಮಡಿಕೇರಿಯ ಕೋವಿಡ್ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತೆಯಾಗಿ ಚಿಕಿತ್ಸೆ ಪಡೆಯುತ್ತಿದ್ದಂತ ಪೊನ್ನಮ್ಮ(60) ಎಂಬುವರು, ಐಸಿಯುನಲ್ಲಿ 12 ದಿನಗಳು ಚಿಕಿತ್ಸೆ ಪಡೆದ ನಂತರ, ಗುಣಮುಖರಾಗಿ ನಿನ್ನೆ ಡಿಸ್ಚಾರ್ಜ್ ಆಗಿದ್ದಾರೆ. ಹೀಗೆ ಡಿಸ್ಚಾರ್ಜ್ ಮಾಡಿದಂತ ಕೋವಿಡ್ ಆಸ್ಪತ್ರೆಯ ಸಿಬ್ಬಂದಿಗಳು ಕುಟುಂಬಸ್ಥರಿಗೂ ಸಹ ತಿಳಿಸದೇ, ಆಂಬುಲೆನ್ಸ್ ಡ್ರೈವರ್ ಒಬ್ಬರಿಗೆ ತಿಳಿಸಿ, ನೇರವಾಗಿ ಅವರನ್ನು ಅವರ ಗ್ರಾಮಕ್ಕೆ ಬಿಟ್ಟು ಬರುವಂತೆ ತಿಳಿಸಿದ್ದಾರೆ.

ಹೀಗೆ ಕೋವಿಡ್ ಕೇರ್ ಆಸ್ಪತ್ರೆಯ ಸಿಬ್ಬಂದಿಗಳು ತಿಳಿಸಿದಂತೆ ಕರೆದುಕೊಂಡು ತೆರಳಿದಂತ ಆಂಬುಲೆನ್ಸ್ ಚಾಲಕ ಮಾತ್ರ, ಮಾಡಿದ್ದು, ಮಾವೀಯತೆ ಮೆರೆಯುವ ಕೆಲಸವಲ್ಲ. ಬದಲಾಗಿ ಅಮಾನವೀಯ ಕೆಲಸ. ಸಂಜೆ 5.30ರ ಸುಮಾರಿಗೆ, ಅವರ ಕಿರಗಂದೂರು ಗ್ರಾಮ 2 ಕಿಲೋಮೀಟರ್ ಇರುವಾಗಲೇ ಮಾರ್ಗಮಧ್ಯೆ ಐಗೂರು ಗ್ರಾಮದಲ್ಲಿ ಬಿಟ್ಟು ವಾಪಾಸ್ ಹೋಗಿದ್ದಾನೆ.

ಹೀಗೆ ಐಗೂರು ಗ್ರಾಮದಲ್ಲೇ ಇಳಿಸಿ ಹೋದಂತ ಆಂಬುಲೆನ್ಸ್ ಚಾಲಕನಿಂದಾಗಿ ಅತ್ತ ಊರಿಗೆ 2 ಕಿಲೋಮೀಟರ್ ನಡೆದುಕೊಂಡು ಹೋಗೋದಕ್ಕೆ ಆಗದೇ, ಸಂಜೆ ಹೊತ್ತಿನಲ್ಲಿ ಪರದಾಡಿದಂತ ಘಟನೆ ನಡೆದಿದೆ. ಕೊನೆಗೆ ದಾರಿ ಹೋಕರು, ವಿಷಯ ತಿಳಿದು ಅವರ ಮನೆಗೆ ತಲುಪಿಸಿದ್ದಾರೆ. ಇಂತಹ ಅಮಾನವೀಯತೆ ಮೆರೆದಂತ ಆಂಬುಲೆನ್ಸ್ ಚಾಲಕನ ವಿರುದ್ಧ ಕುಟುಂಬಸ್ಥರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

driving
- Advertisement -

Related news

error: Content is protected !!