Friday, April 26, 2024
spot_imgspot_img
spot_imgspot_img

ಕೊಕ್ಕಡ: ಆಕಸ್ಮಿಕ ಬೆಂಕಿ ಅವಘಡ – ಲಕ್ಷಾಂತರ ರೂ. ನಷ್ಟ!

- Advertisement -G L Acharya panikkar
- Advertisement -

ಕೊಕ್ಕಡ: ಕೊಕ್ಕಡ ಗ್ರಾಮದ ಪಿಜಿನಡ್ಕ ಪಿ.ಕೆ ಚೀಂಕ್ರ ಎಂಬವರ ಮನೆ ಹಾಗೂ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ 3 ಕ್ವಿಂಟಾಲ್‌ಗೂ ಮಿಕ್ಕಿ ರಬ್ಬರ್ ಶೀಟ್ ಹಾಗೂ ಮನೆಯ ಅಗತ್ಯ ದಾಖಲೆ ಪತ್ರಗಳು, ನಗದು ಬೆಂಕಿಗಾಹುತಿಯಾದ ಘಟನೆ ಜ.13ರಂದು ನಡೆದಿದೆ.

ಪಿಜಿನಡ್ಕ ನಿವಾಸಿ ಪಿ.ಕೆ ಚೀಂಕ್ರರವರು ಹೊಸಮನೆ ಕಟ್ಟುತ್ತಿದ್ದು, ಮನೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಹೊಸ ಮನೆಯಲ್ಲಿಯೇ ಇರುತ್ತಿದ್ದ ಮನೆ ಮಂದಿ ಅಡುಗೆ ಮಾತ್ರ ಹಳೆ ಮನೆಯಲ್ಲಿ ಮಾಡುತ್ತಿದ್ದರು. ಹಳೆ ಮನೆಗೆ ತಾಗಿಕೊಂಡೇ ಕೊಟ್ಟಿಗೆ ಇದ್ದು, ಮನೆ ವಸ್ತುಗಳನ್ನು ಅದರಲ್ಲಿಯೇ ಜೋಡಿಸಿಡಲಾಗಿತ್ತು. ಅಲ್ಲದೆ ಮನೆಯೊಳಗಡೆ ರಬ್ಬರ್ ಶೀಟ್‌ನ ದಾಸ್ತಾನು, ಮನೆಯವರ ದಾಖಲೆ ಪತ್ರಗಳು ಇದ್ದವು.

ಅಡುಗೆ ಕೋಣೆಯಲ್ಲಿ ರಬ್ಬರ್ ಶೀಟನ್ನು ಕೂಡ ಒಣಗಲು ಹಾಕಿದ್ದರು. ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಎದ್ದು ಹಳೆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಜ.13 ರಂದು ಸಹ ಅಡುಗೆ ಮಾಡಲಾಗಿತ್ತು. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ ಬೆಂಕಿ ಹಿಡಿದು ಮನೆಯ ಹಂಚು ಹಾಗೂ ಶೀಟ್ ಒಡೆಯುವ ಸದ್ದು ಕೇಳಿ ಹೊರಗೆ ಬಂದು ನೋಡಿದಾಗ ರಬ್ಬರ್ ಶೀಟ್‌ಗೆ ತಗುಲಿದ ಬೆಂಕಿ ಮನೆಯನ್ನು ಸಂಪೂರ್ಣವಾಗಿ ಆವರಿಸಿತ್ತು.

ಅಕ್ಕಪಕ್ಕದವರು ಸೇರಿಕೊಂಡು ಬೆಂಕಿ ನಂದಿಸಿದ್ದರು. ಆದರೆ ಆ ವೇಳೆಗಾಗಲೇ 3 ಕ್ವಿಂಟಾಲ್‌ಗೂ ಮಿಕ್ಕಿದ ರಬ್ಬರ್ ಶೀಟ್, ಅಗತ್ಯ ದಾಖಲೆ ಪತ್ರಗಳು ಹಾಗೂ ಬ್ಯಾಗಿನಲ್ಲಿದ್ದ ಸುಮಾರು 30 ಸಾವಿರ ನಗದು ಸುಟ್ಟುಹೋಗಿದೆ ಎಂದು ವರದಿಯಾಗಿದೆ. ಘಟನೆಯಿಂದಾಗಿ ಸುಮಾರು 1.50 ಲಕ್ಷ ರೂ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ಗ್ರಾಮಕರಣಿಕ ರೂಪೇಶ್, ಗ್ರಾ.ಪಂ. ಸದಸ್ಯರುಗಳಾದ ಯೋಗೀಶ್ ಆಲಂಬಿಲ, ಜಗದೀಶ್, ಪುರುಷೋತ್ತಮ, ಜಾನಕಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!