Thursday, April 18, 2024
spot_imgspot_img
spot_imgspot_img

*ರಂಗಮನೆಯಲ್ಲಿ “ಕೋಲ” ಅರೆಭಾಷೆ ಚಿತ್ರದ ಪೂರ್ವತಯಾರಿ ಸಭೆ*

- Advertisement -G L Acharya panikkar
- Advertisement -

ದಿನಾಂಕ 13/9/2020 ಭಾನುವಾರ ದಂದು ರಂಗಮನೆಯ ಖ್ಯಾತ ಯಕ್ಷಗಾನ ಕಲಾವಿದ ಸುಜನಾ ಸುಳ್ಯ ರ 84ನೇ ಜನ್ಮದಿನಾಚರಣೆಯನ್ನು ರಂಗಮನೆ ಸುಳ್ಯದಲ್ಲಿ ಆಚರಿಸಲಾಯಿತು.


ಕಾರ್ಯ ಕ್ರಮದಲ್ಲಿ ರಂಗ ಮಾಂತ್ರಿಕ ಜೀವನ್ ರಾಂ ಸುಳ್ಯ , ಅರೆಭಾಸೆ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ, ಜಯಪ್ರಕಾಶ್ ಪೆರುಮುಂಡ , ರಾಜ್ ಮುಖೇಶ್ , ವಿನೋದ್ ಮೂಡಗದ್ದೆ, ರವೀಶ್ ಪಡ್ಡಂಬೈಲು, ಶ್ರೀಮತಿ ಮಮತಾ ರವೀಶ್ ಪಡ್ಡಂಬೈಲು ಮುಂತಾದವರು ಭಾಗವಹಿಸಿದ್ದರು.


ನಂತರ ಅರೆಭಾಷೆ ಕಿರುಚಿತ್ರ “ಕೋಲ” ಇದರ ಪೂರ್ವ ತಯಾರಿಯ ಸಭೆಯನ್ನು ರಂಗಮನೆ ಸುಳ್ಯದಲ್ಲಿ ಮಾಡಲಾಯಿತು. ಟೀಮ್ ಉತ್ತಮ್ ತಂಡದವರ ಈ ಅರೆಭಾಷೆ ಕಿರುಚಿತ್ರ “ಕೋಲ” ಸದ್ಯದಲ್ಲೇ ಶೂಟಿಂಗ್ ಸೆಟ್ಟೇರಲಿದ್ದು, ನವೆಂಬರ್ ನಲ್ಲಿ ಚಿತ್ರ ಬಿಡುಗಡೆ ಮಾಡುವುದಾಗಿ ನಿರ್ದೇಶಕ ಹವಿನ್ ಗುಂಡ್ಯರವರು ತಿಳಿಸಿದ್ದಾರೆ.


ಹವಿನ್ ಗುಂಡ್ಯರು ಈಗಾಗಲೇ ಗೊಬ್ಬು , ಮಾರಣಹೋಮ, 5am ಎಂಬ ಮೂರು ಕಿರುಚಿತ್ರ ನಿರ್ದೇಶಿಸಿದ್ದು , ಗೊಬ್ಬು ಕಿರುಚಿತ್ರವು ಉತ್ತರಾಖಂಡನಲ್ಲಿ ನಡೆಯಲಿರುವ ಕ್ಲಬ್ಬಿ ಇಂಡಿಯಾ ಮಿನಿಮೂವಿ ಫೆಸ್ಟಿವಲ್ ಗೆ ಆಯ್ಕೆಯಾಗಿ ಫೈನಲ್ ರೌಂಡ್ ನಲ್ಲಿದೆ.

- Advertisement -

Related news

error: Content is protected !!