ಬೆಂಗಳೂರು: ಗೋವಾದಲ್ಲಿ ನಡೆದ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅವರು ‘ಕಾಂತಾರ ಅಧ್ಯಾಯ 1′ ಚಿತ್ರದ ದೈವ ಕೃತ್ಯವನ್ನು ಮತ್ತು ಉಳ್ಳಾಲ್ತಿ ದೇವಿಯನ್ನು ಫೀಮೇಲ್ ಗೋಸ್ಟ್ (ಹೆಣ್ಣು ದೆವ್ವ’) ಎಂದು ಹೇಳಿ ತಮಾಷೆಯಾಗಿ ಅನುಕರಣೆ ಮಾಡಿದ್ದಾರೆಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು.


ಇದರ ಬೆನ್ನಲ್ಲೆ ರಣವೀರ್ ಸಿಂಗ್ ಕ್ಷಮೆಯಾಚಿಸಬೇಕೆಂದು ವ್ಯಾಪಕ ಆಗ್ರಹ ಕೇಳಿ ಬಂದಿತ್ತು. ಇದರಂತೆ ರಣವೀರ್ ಸಿಂಗ್ ಕ್ಷಮಾಪನೆ ಕೂಡ ನಡೆಸಿದ್ದರು. ಬಳಿಕದ ಬೆಳವಣಿಗೆಯಲ್ಲಿ, ರಣವೀರ್ ಹೇಳಿದ್ದನ್ನು ಕ್ಷಮಿಸಲು ಸಾಧ್ಯವಿಲ್ಲ, ಶಿಕ್ಷೆ ಆಗ್ಲೇ ಬೇಕು ಹಾಗೂ ಕಾನೂನು ಕ್ರಮ ಕೈಗೊಳ್ಳಕೆಂದು ರಣವೀರ್ ವಿರುದ್ಧ ವಕೀಲರಿಂದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿದೆ. ಇದೊಂದು ಕ್ರಿಮಿನಲ್ ಅಫೆನ್ಸ್ ಆಗಿದ್ದು, ಭಾರತೀಯ ನ್ಯಾಯ ಸಮ್ಮಿತಿ ಸೆಕ್ಷನ್ (299) (302) (354)ನಲ್ಲಿ ರಣವೀರ್ ವಿರುದ್ಧ ಹಿರಿಯ ವಕೀಲ ಪ್ರಶಾಂತ್ ಮೆತಲ್ ದೂರು ದಾಖಲಿಸಿದ್ದಾರೆ.








