Thursday, December 5, 2024
spot_imgspot_img
spot_imgspot_img

ಕೊಳ್ನಾಡು ಗ್ರಾಮದ ಸೆರ್ಕಳ ಗುಡ್ಡೆಯಿಂದ ಬೃಹತ್ ಗಾತ್ರದ ಬಂಡೆ ಕಲ್ಲು ಮನೆಯ ಸ್ನಾನದ ಕೊಠಡಿಯ ಮೇಲೆ ಬಿದ್ದು ಕೊಠಡಿ ಸಂಪೂರ್ಣ ಜಖಂ.

- Advertisement -
- Advertisement -

ಬೃಹತ್ ಕಲ್ಲನ್ನು ಒಡೆದು ತೆಗೆದ ಎಸ್ ಡಿ ಪಿ ಐ ವಿಪತ್ತು ನಿರ್ವಹಣಾ ತಂಡ

ವಿಟ್ಲ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಕೊಳ್ನಾಡು ಗ್ರಾಮದ ಸೆರ್ಕಳ ಮನೆಯೊಂದರ ಸ್ನಾನ ಕೊಠಡಿಗೆ ಬೃಹತ್ ಗಾತ್ರದ ಬಂಡೆಕಲ್ಲು ಬಿದ್ದ ಪರಿಣಾಮ ಸ್ನಾನದ ಕೊಠಡಿ ಸಂಪೂರ್ಣವಾಗಿ ಹಾನಿಗೊಂಡಿದೆ.

ಕೊಳ್ನಾಡು ಗ್ರಾಮದ ಸೆರ್ಕಳ ನಿವಾಸಿ ಇಬ್ರಾಹಿಂ ಅವರ ಮನೆಯ ಹಿಂಬದಿಯಲ್ಲಿರುವ ಗುಡ್ಡೆಯಿಂದ ಬೃಹತ್ ಗಾತ್ರದ ಬಂಡೆಕಲ್ಲು ಮನೆಯ ಸ್ನಾನದ ಕೊಠಡಿಗೆ ಉರುಳಿ ಬಿದ್ದಿದೆ. ಇದರಿಂದ ಸ್ನಾನಗೃಹ ಸಂಪೂರ್ಣವಾಗಿ ಧ್ವಂಸಗೊಂಡಿದೆ. ಒಂದು ಮನೆಯೊಳಗಡೆ ಕಲ್ಲು ಬಿದ್ದಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆಗಳಿತ್ತು.
ಮಾಹಿತಿ ತಿಳಿದ ಕೊಳ್ನಾಡು ಗ್ರಾಮದ ಎಸ್ ಡಿ ಪಿ ಐ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹಾಗೂ ಸ್ಥಳೀಯರು ಮೊದಲು ಕಲ್ಲನ್ನು ಒಡೆದು ತೆಗೆಯಲು ಪ್ರಯತ್ನಿಸಿ ಬಹುತೇಕ ಬಂಡೆ ಕಲ್ಲನ್ನು ತೆಗೆದು ರಾತ್ರಿ ಯಾದಂತೆ ಮಿಷಿನ್ ಬಳಸಿ ಕಲ್ಲನ್ನು ತೆರವು ಗೊಳಿಸಿದರು.

ಸಂಜೆ 6 ಗಂಟೆಗೆ ಕೆಲಸ ಶುರುಮಾಡಿದ ತಂಡ ರಾತ್ರಿ 11ಗಂಟೆಯವರೇಗೆ ಕೆಲಸ ಮಾಡಿ ಕಲ್ಲನ್ನು ಸಂಪೂರ್ಣ ತೆರವುಗೊಳಿಸಿದರು.

ಎಸ್ ಡಿ ಪಿ ಐ ವಿಪತ್ತು ನಿರ್ವಹಣಾ ತಂಡದ ಜವಾಬ್ದಾರಿ ಯನ್ನು ಪಾಪ್ಯುಲರ್ ಪ್ರಂಟ್ ಪರ್ತಿಪ್ಪಾಡಿ ಯುನಿಟ್ ಅಧ್ಯಕ್ಷ ಅನೀಸ್ ಕುಡುತ್ತಮೊಗೆರು ಮತ್ತು
ಎಸ್ ಡಿ ಪಿ ಐ ಕೊಳ್ನಾಡು ಸಾಲೆತ್ತೂರು ವಲಯ ಅಧ್ಯಕ್ಷ ಲತೀಪ್ ಸಾಲೆತ್ತೂರು ವಹಿಸಿದ್ದರು.

- Advertisement -

Related news

error: Content is protected !!