Monday, June 8, 2026
spot_imgspot_img
spot_imgspot_img

ಮಾರಕಾಸ್ತ್ರಗಳಿಂದ ಹೊಡೆದು ಯುವಕನನ್ನು ಕೊಲೆಗೈದ ದುಷ್ಕರ್ಮಿಗಳು..!

- Advertisement -
- Advertisement -

ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಲೆಗೈದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಹೆಗೂರು ಗ್ರಾಮದಲ್ಲಿ ನಡೆದಿದೆ.

ಕೊಲೆಯಾದ ಯುವಕ ಸಿದ್ದು ಇಂಡಿ (21) ಎಂದು ಗುರುತಿಸಲಾಗಿದೆ.

ಯುವಕನನ್ನು ಮಾರಕಾಸ್ತ್ರಗಳಿಂದ ಮುಖ ಹಾಗೂ ತಲೆಗೆ ಹೊಡೆದು ಭೀಕರವಾಗಿ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮಂಜು ಖೈರವಾಡಗಿ ಎಂಬಾತನಿಗೂ ಗಂಭೀರ ಗಾಯವಾಗಿದ್ದುಮ, ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇವಲ ಬೈಕ್ ಟಚ್ ಆಯಿತು ಎಂಬ ನೆಪದ ಜೊತೆಗೆ ಹಳೆ ರಾಜಕೀಯ ದ್ವೇಷ ಹಿನ್ನೆಲೆ ಸಾಗರ ಕಿರಸ್ಯಾಳ, ಯಮನಪ್ಪ ಕಿರಸ್ಯಾಳ, ಶಾಂತಪ್ಪ, ಶಿವಾನಂದ, ಪರಶು ಸೇರಿದಂತೆ ಇತರರು ಸೇರಿ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!