- Advertisement -
- Advertisement -



ಕೋಲಾರ: ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ಕಳ್ಳರ ಗ್ಯಾಂಗ್‌ವೊಂದು ಕಿವಿಯೋಲೆಗಾಗಿ ವೃದ್ದೆಯ ಕಿವಿಯನ್ನೇ ಕತ್ತರಿಸಿ ಕ್ರೌರ್ಯ ಮೆರೆದಿರುವ ಘಟನೆ ನಡೆದಿದೆ.
ರತ್ನಮ್ಮ(70) ದಾಳಿಗೊಳಗಾದ ವೃದ್ದೆ. ಇವರು ಒಂಟಿ ಮನೆಯಲ್ಲಿ ವಾಸವಿದ್ದರು ಎನ್ನಲಾಗಿದೆ. ತಡ ರಾತ್ರಿ ಒಂಟಿ ಮನೆ ಮೇಲೆ ದಾಳಿ ಮಾಡಿರುವ ಕಿಡಿಗೇಡಿಗಳು ಕಿವಿಯೋಲೆಗಾಗಿ ವೃದ್ದೆಯ ಕಿವಿಯನ್ನೇ ಕತ್ತರಿಸಿ, ಬಳಿಕ ಚಿನ್ನದ ಸರವನ್ನು ಕಸಿದು ಅಲ್ಲಿಂದ ಪರಾರಿಯಾಗಿದ್ದಾರೆ.
ಘಟನಾ ಸ್ಥಳಕ್ಕೆ ಕೋಲಾರ ಎಸ್ಪಿ ಭೇಟಿ ನೀಡಿದ್ದು, ಕಳ್ಳರ ಗ್ಯಾಂಗ್ ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.
- Advertisement -








