Saturday, April 27, 2024
spot_imgspot_img
spot_imgspot_img

ವಿಟ್ಲ: ಹಿಂದೂ ರುದ್ರಭೂಮಿ ರಕ್ಷಣಾ ಹೋರಾಟ ಸಮಿತಿ, ಬಾಳೆಕೋಡಿ ಕನ್ಯಾನ ಇದರ ವತಿಯಿಂದ ಬೃಹತ್ ಪ್ರತಿಭಟನೆ

- Advertisement -G L Acharya panikkar
- Advertisement -

ವಿಟ್ಲ: ಹಿಂದೂ ರುದ್ರಭೂಮಿ ರಕ್ಷಣಾ ಹೋರಾಟ ಸಮಿತಿ, ಬಾಳೆಕೋಡಿ ಕನ್ಯಾನ ಇದರ ವತಿಯಿಂದ ಕನ್ಯಾನದ ಬಾಳೆಕೋಡಿಯಲ್ಲಿರುವ ಹಿಂದೂ ರುದ್ರಭೂಮಿಯನ್ನು ಇತರೆ ಉದ್ದೇಶಗಳಿಗೆ ಉಪಯೋಗಿಸುವ ಮೂಲಕ ಹಿಂದೂ ಸಮಾಜದ ಮೇಲೆ ನಡೆಸುವ ದೌರ್ಜನ್ಯವನ್ನು ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಯಿತು. ಕನಾನ್ಯ ಶ್ರೀ ರಾಘವೇಂದ್ರ ಭಜನಾ ಮಂದಿರದಿಂದ ಕನ್ಯಾನ ಗ್ರಾಮ ಪಂಚಾಯತ್‌ಗೆ ಕಾಲ್ನಡಿಗೆ ಜಾಥ ನಡೆಯಿತು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ, ಪುತ್ತೂರು ಜಿಲ್ಲಾ ಹಿಂದೂ ಜಾಗರಣ ವೇದಿಕೆ ಸಹ ಸಂಚಾಲಕ ನರಸಿಂಹ ಶೆಟ್ಟಿ ಮಾಣಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ, ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ್ ಪ್ರಮುಖ್ ನರಸಿಂಹ ಶೆಟ್ಟಿ ಮಾಣಿ, ವಿಶ್ವ ಹಿಂದೂ ಪರಿಷದ್ ವಿಟ್ಲ ಪ್ರಖಂಡದ ಅಧ್ಯಕ್ಷ ಪದ್ಮನಾಭ ಕಟ್ಟೆ, ಪ್ರಮುಖರಾದ ಶ್ರೀಧರ್‍ ತೆಂಕಿಲ, ಮಾಜಿ ತಾಲೂಕು ಪಂಚಾಯತ್‌ ಸದಸ್ಯರು ಕುಮಾರ್ ಭಟ್ ಬದಿಕೋಡಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ ವಿ. ನಾಯ್ಕ, ಸದಸ್ಯರಾದ ಕೆ.ಪಿ. ರಘುರಾಮ ಶೆಟ್ಟಿ, ವನಿತಾ ಧರ್ಮರಾಜ, ಮನೋಜ ಬನಾರಿ, ಧರ್ಣಮ್ಮ ಗೌಡ, ಹಿಂದು ರುದ್ರ ಭೂಮಿ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಕೇಶವ ಗೌಡ ಕಾಣಿಚ್ಚಾರು, ಗೌರವಾಧ್ಯಕ್ಷ ಪೂವಪ್ಪ ಗೌಡ ಕಾಣಿಚ್ಚಾರು, ಕಾರ್ಯದರ್ಶಿ ಜಯಪ್ರಸಾದ್ ಬಾಳೆಕೋಡಿ, ಜತೆ ಕಾರ್ಯದರ್ಶಿ ಸುಧಾಕರ ಗುರಿಮಾರ್ಗ, ಬಾಳಪ್ಪ ಎನ್. ಕಂಬ್ಳ, ಉಪಾಧ್ಯಕ್ಷ ರಾಜೇಶ್ ಭಟ್‌ ಕಾಣಿಚಾರು, ಲೋಕೇಶ್ ಗೌಡ, ಕೃಷ್ಣಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆಯಲ್ಲಿ ಜಿಲ್ಲಾಧಿಕಾರಿಯವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೂಲಕ ಮನವಿ ಸಲ್ಲಿಸಲಾಯಿತು. ಈ ವೇಳೆ ಪೆರುವಾಯಿ, ಮಾಣಿಲ, ಕರೋಪಾಡಿ, ಅಳಿಕೆ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

- Advertisement -

Related news

error: Content is protected !!