Friday, April 26, 2024
spot_imgspot_img
spot_imgspot_img

ನಾಲ್ವರು ಪಾದಚಾರಿ ಮಹಿಳೆಯರಿಗೆ ಗೂಡ್ಸ್ ಆಟೋ ಡಿಕ್ಕಿ: ಯುವತಿ ಸಾವು, ಮೂವರ ಸ್ಥಿತಿ ಗಂಭೀರ.!

- Advertisement -G L Acharya panikkar
- Advertisement -

ಕೊಳ್ಳೇಗಾಲ: ಕೊಳ್ಳೇಗಾಲ ಪಟ್ಟಣದ ಮುಂಡಿಗುಂಡ ಗ್ರಾಮದ ಕಡೆಗೆ ಕೊಳ್ಳೇಗಾಲದಿಂದ ತೆರಳುತ್ತಿದ್ದ ಗೂಡ್ಸ್ ಆಟೋ ರಸ್ತೆ ಬದಿಯಲ್ಲಿ ಸಂಚರಿಸುತ್ತಿದ್ದ ನಾಲ್ವರು ಪಾದಚಾರಿ ಮಹಿಳೆಯರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಓರ್ವ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

ಪಟ್ಟಣದ ಮುಡಿಗುಂಡ ಗ್ರಾಮದವರಾದ ನಿವೇದಿತಾ(38), ಪವಿತ್ರ(36), ರಕ್ಷಿತಾ(12), ಪವಿತ್ರ(21) ಅಪಘಾತಕ್ಕೊಳಗಾದವರು. ಈ ನಾಲ್ವರ ಪೈಕಿ ಯುವತಿ ಪವಿತ್ರ (21)ಮೃತಪಟ್ಟಿದ್ದಾಳೆ.ಇಲ್ಲಿನ ಮುಡಿಗುಂಡ ಗ್ರಾಮದಲ್ಲಿರುವ  ದೇವಾಲಯಕ್ಕೆ ಪೂಜೆಗೆಂದು ತೆರಳುತ್ತಿದ್ದ ನಿವೇದಿತಾ, ಪವಿತ್ರ, ರಕ್ಷಿತಾ, ಪವಿತ್ರ (21) ಎಂಬುವರು ಪಾದಚಾರಿ ಮಾರ್ಗದಲ್ಲಿ ಹೋಗುತ್ತಿದ್ದರು.

ಈ ವೇಳೆ ಕೊಳ್ಳೇಗಾಲದ ಕಡೆಯಿಂದ ಬಂದ ಗೂಡ್ಸ್ ಆಟೋ ಡಿಕ್ಕಿ ಹೊಡೆದ ಪರಿಣಾಮ ನಾಲ್ವರಿಗೂ ತೀವ್ರ ಪೆಟ್ಟಾಗಿದೆ. ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲಿ ಪವಿತ್ರ(21) ಅಸುನೀಗಿದ್ದಾಳೆ. ಉಳಿದ ಮೂವರ‌ ಪರಿಸ್ಥಿತಿ ಗಭೀರವಾಗಿದೆ .ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!