Friday, March 29, 2024
spot_imgspot_img
spot_imgspot_img

ಪುಷ್ಪರಥದ ಬದಲು ಚಿನ್ನದ ರಥ- ಅರ್ಚಕ ವರ್ಗ ಅಸಮಾಧಾನ

- Advertisement -G L Acharya panikkar
- Advertisement -

ಉಡುಪಿ(ಅ.25): ನವರಾತ್ರಿಯ ಹಿನ್ನೆಲೆಯಲ್ಲಿ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಸನ್ನಿಧಿಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತಿವೆ. ಆದರೆ ಈ ನಡುವಲ್ಲೇ ಇಂದು ಪುಷ್ಪ ರಥ ಎಳೆಯುವ ವಿಚಾರದಲ್ಲಿ ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಶಿಷ್ಟಾಚಾರ ಉಲ್ಲಂಘಿಸಿರುವ ಆರೋಪ ಕೇಳಿಬಂದಿದೆ.

ಈ ಬಾರಿ ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಉಡುಪಿ ಜಿಲ್ಲೆಯ ಪ್ರಮುಖ ಪುಣ್ಯಕ್ಷೇತ್ರವಾಗಿ ರುವ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿಯ ಉತ್ಸವ ನಡೆಯುತ್ತಿದೆ.ವರ್ಷಂಪ್ರತಿ ನವರಾತ್ರಿಯ ವಿಜಯದಶಮಿಯ ದಿನದಂದು ದೇವಿಯ ಮೂರ್ತಿಯನ್ನು ಪುಷ್ಪರಥದಲ್ಲಿ ರಿಸಿ ಎಳೆಯುವುದು ವಾಡಿಕೆ. ಅಂತೆಯೇ ದೇವಸ್ಥಾನದ ಸಿಬ್ಬಂದಿ ಪುಷ್ಪ ರಥವನ್ನು ಸಿಂಗಾರ ಮಾಡಿದ್ದರು. ಆದರೆ ಶಾಸಕ ಸುಕುಮಾರ್ ಶೆಟ್ಟಿ ಅವರು ಪುಷ್ಪರಥದ ಬದಲು ಚಿನ್ನದ ರಥ ಎಳೆಯು ವಂತೆ ತಾಕೀತು ಮಾಡಿದ್ದಾರೆ.

ಈ ವೇಳೆಯಲ್ಲಿ ದೇವಸ್ಥಾನದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಶಾಸಕರ ಬಳಿಯಲ್ಲಿ ಇದು ವಾಡಿಕೆ ಎಂದು ಹೇಳಿದರೂ ಕೇಳದೆ ಚಿನ್ನದ ರಥವನ್ನು ಎಳೆಯಬೇಕೆಂದು ಹೇಳಿದ್ದಾರೆ. ಅಂತಿಮವಾಗಿ ಶಾಸಕರ ಆದೇಶದ ಮೇರೆಗೆ ಕೊಲ್ಲೂರಿನಲ್ಲಿ ಈ ಬಾರಿ ಪುಷ್ಪರಥವನ್ನು ಬದಿಗಿರಿಸಿ ಚಿನ್ನದ ರಥವನ್ನು ಎಳೆಯಲಾಗಿದೆ.

ಪುಷ್ಪರಥದ ಬದಲು ಚಿನ್ನದ ರಥ ಎಳೆಯುವ ಮೂಲಕ ಸಂಪ್ರದಾಯವನ್ನು ಮುರಿದಿರುವುದಕ್ಕೆ ಅರ್ಚಕ ವರ್ಗ ಅಸಮಾಧಾನವನ್ನು ವ್ಯಕ್ತಪಡಿಸಿದೆ.

- Advertisement -

Related news

error: Content is protected !!