Tuesday, April 23, 2024
spot_imgspot_img
spot_imgspot_img

ಶ್ರದ್ಧಾ ಭಕ್ತಿಯ ಕೇಂದ್ರ ಕೊಲ್ಲೂರು ಮೂಕಾಂಬಿಕೆ ಸನ್ನಿಧಿ!- ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ನೇಮಕದಲ್ಲಿ ಹೊಲಸು ರಾಜಕೀಯವೇಕೆ!!

- Advertisement -G L Acharya panikkar
- Advertisement -

✍️✍️✍️
ಸಂದೇಶ್

(ಪ್ರಜಾಪ್ರಭುತ್ವ ಮಾದರಿಯಲ್ಲಿ ಸದಸ್ಯರುಗಳೇ ಅಧ್ಯಕ್ಷರನ್ನು ಆರಿಸಲು ಅವಕಾಶ ಕಲ್ಪಿಸಿ!ಶ್ರದ್ಧಾ, ಭಕ್ತಿಯ ಕೇಂದ್ರದಲ್ಲಿ ಹಿಂದುಗಳ ನಂಬಿಕೆ, ಭಾವನೆಗಳಿಗೆ ಧಕ್ಕೆ ತರಬೇಡಿ!ದೇವಸ್ಥಾನದಲ್ಲಿ ರಾಜಕೀಯ ನ್ಯಾಯವೇ?)

ಹಿಂದೂಗಳಿಗೆ ಶ್ರದ್ಧಾಭಕ್ತಿಯ ಕೇಂದ್ರ ದೇವಸ್ಥಾನ! ದೇವರ ಭಯವೇ ಜ್ಞಾನದ ಆರಂಭ! ಜೀವನದಲ್ಲಿ ತಪ್ಪು ಮಾಡಿದಾಗ ದೇವಸ್ಥಾನದಲ್ಲಿ ಹೋಗಿ ಶ್ರದ್ಧಾಭಕ್ತಿಯಿಂದ ಕ್ಷಮೆ ಕೇಳಿದರೆ ಮನಸ್ಸಿಗೆ ಒಂದು ರೀತಿಯ ಸಮಧಾನ. ಸಂತಾನವಾಗದವರು, ಜೀವನದಲ್ಲಿ ಕಷ್ಟ ಅನುಭವಿಸಿದವರು, ಹೊಸ ಉದ್ಯೋಗ, ವಿದ್ಯೆ ಆರಂಭಿಸುವಾಗ ಹೀಗೆ ವಿವಿಧ ಕಾರಣವನ್ನಿಟ್ಟು ದೇವಸ್ಥಾನಗಳಿಗೆ ತೆರಳಿ ಭಯ ಭಕ್ತಿಯಿಂದ ದೇವರನ್ನು ಅರ್ಚಿಸಿ, ಆರಾಧಿಸುತ್ತಾರೆ. ಹೀಗೆ ಧಾರ್ಮಿಕ ಶ್ರದ್ಧಾಕೇಂದ್ರದ ಕುರಿತು ಹಿಂದುಗಳಿಗೆ ಅಪಾರ ಗೌರವ! ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾವುದೇ ಪಕ್ಷದ ನಾಯಕರು ಕೂಡ ಅಧಿಕಾರ ಪಡೆಯುವ ಮುಂಚಿತವಾಗಿ ಹೋಗಿ ಅರ್ಚನೆಗೈದು ಬರುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಚಿವ ಸ್ಥಾನದ ಪ್ರಮಾಣವಚನ ಕಾರ್ಯಕ್ರಮದಲ್ಲಿ ಪಕ್ಷಬೇಧವಿಲ್ಲದೆ ದೇವರ ಹೆಸರಿನಲ್ಲಿ ಅಧಿಕಾರ ಪಡೆಯುವುದನ್ನು ನೋಡಿದ್ದೆವೆ. ಹಿಂದೂ ಸಂಸ್ಕೃತಿಯಲ್ಲಿ ದೇವಸ್ಥಾನ, ದೇವರುಗಳಿಗೆ ಮಹತ್ವದ ಸ್ಥಾನ ಕಲ್ಪಿಸಿದ್ದೆವೆ ಎಂದರೂ ತಪ್ಪಿಲ್ಲ!

ಕೊಡಚಾದ್ರಿಯ ತಪ್ಪಲಿನಲ್ಲಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ!ಕೇರಳದ ಕಾಲಟಿಯಲ್ಲಿ ಹುಟ್ಟಿದ ಶಂಕರಾಚಾರ್ಯರು! ಎಲ್ಲಿಂದೆಲ್ಲಿಯ ಸಂಬಂಧ!ಕೊಲ್ಲೂರು ದೇವಸ್ಥಾನಕ್ಕೆ ಅನ್ಯರಾಜ್ಯಗಳಿಂದಲೂ ಭಕ್ತಾದಿಗಳು ಆಗಮಿಸುತ್ತಾರೆ ಎಂಬಲ್ಲಿಗೆ ಮೂಕಾಂಬಿಕೆಯ ಶಕ್ತಿಯ ವ್ಯಾಪಕತೆ ಅರಿಯಬೇಕಿದೆ.

ರಾಜ್ಯದಲ್ಲಿ ಹಿಂದುತ್ವದ ಹೆಸರಿನಲ್ಲಿ ಮತಯಾಚನೆ ಮಾಡಿ ಅಧಿಕಾರ ಪಡೆದುಕೊಂಡ ಹಿಂದುಗಳ ಪಕ್ಷ ಭಾರತೀಯ ಜನತಾ ಪಕ್ಷ! ಶ್ರದ್ಧಾಭಕ್ತಿಯ ಕೇಂದ್ರ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯ ಸರ್ವತೋಮುಖ ಅಭಿವೃದ್ಧಿಗಾಗಿ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಿರುವುದು ಶ್ಲಾಘನೀಯ. ಸದಸ್ಯರನ್ನು ಆಯ್ಕೆ ಮಾಡುವಾಗ ಅರ್ಹರನ್ನು ಆಯ್ಕೆ ಮಾಡಿರುವುದಂತೂ ಸ್ಪಷ್ಟ. ಸಮಿತಿಗೆ ಆಯ್ಕೆಯಾದ ಸದಸ್ಯರ ಪೂರ್ವಾಪರ ನೋಡಿದರೆ “ಸೇವಾ ಹೀ ಪರಮೋ ಧರ್ಮ” *ಎನ್ನುವ ವಾಕ್ಯಕ್ಕೆ ಚ್ಯುತಿ ಬಾರದಂತೆ ಸಮಿತಿಗೆ ಆಯ್ಕೆಯಾಗುವ ಮುಂಚೆಯೆ ಕಾರ್ಯೋನ್ಮುಖರಾಗಿರುವುದು ಕಂಡುಬರುತ್ತದೆ. ಅವರ ಸೇವಾಗುಣ ನೋಡಿಯೆ ಕೊಲ್ಲೂರು ಮೂಕಾಂಬಿಕೆಯು ತನ್ನ ಕ್ಷೇತ್ರದ ಅಭಿವೃದ್ಧಿಗೆ ಇವರುಗಳೆ ಸೂಕ್ತ ಎನ್ನುವುದನ್ನು ಸೂಚಿಸಿರಬಹುದು ಎಂದರೂ ಅತಿಶಯೋಕ್ತಿಯಲ್ಲ.

ವ್ಯವಸ್ಥಾಪನಾ ಸಮಿತಿಗೆ ಸದಸ್ಯರುಗಳ ಆಯ್ಕೆಯಲ್ಲಿ ರಾಜಕೀಯ ಮಾಡಿಲ್ಲದಿರುವಾಗ ಸಮಿತಿಯ ಆಧ್ಯಕ್ಷರ ಆಯ್ಕೆಯಲ್ಲಿ ಯಾಕೇ ಈ ರಾಜಕೀಯ! ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶ್ರದ್ಧಾಭಕ್ತಿಯ ಕೇಂದ್ರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ಸದಸ್ಯರುಗಳನ್ನು ಆಯ್ಕೆ ಮಾಡಿದ ನಂತರ ಆ ಸಮಿತಿಯಲ್ಲಿರುವ ಒಂಬತ್ತು ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡು ಅವರಲ್ಲಿ ಸಮಿತಿಗೆ ಅಧ್ಯಕ್ಷರನ್ನು ಆರಿಸುವುದು ಕ್ರಮ! ಆದರೆ ಕೊಲ್ಲೂರು ದೇವಳದಲ್ಲಿ ಸದಸ್ಯರ ನೇಮಕಗೊಂಡ ನಂತರ ಸಮಿತಿಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಯಾಕೆ ಈ ರಾಜಕೀಯ ಎನ್ನುವುದು ಅರ್ಥವಾಗುತ್ತಿಲ್ಲ.

ರಾಜಕೀಯ ಹೊರತು ಪಡಿಸಿದಾಗ ದೇವಸ್ಥಾನದ ಅಭಿವೃದ್ಧಿ ಸಾಧ್ಯ. ಮೂಲಗಳ ಪ್ರಕಾರ ಸಮಿತಿಗೆ ಸದಸ್ಯರಾಗಿರುವವರು ಯಾರು ಕೂಡ ಸ್ವತಃ ಅವರಾಗಿಯೆ ಅರ್ಜಿ ಸಲ್ಲಿಸದೆ, ಲಾಭಿ ಮಾಡಿಲ್ಲವಂತೆ!ಅವರ ಸೇವಾಗುಣ ಆಧರಿಸಿ ಅವರ ಹೆಸರು ಪ್ರಸ್ತಾವನೆಯಾಗಿದೆ. ಹೆಸರು ಪ್ರಸ್ತಾವನೆಯಾದ ನಂತರ ಒಲ್ಲದ ಮನಸ್ಸಿನಿಂದಲೆ ಅವರು ಮೂಕಾಂಬಿಕೆಯ ಸೇವೆಗೆ ಅಸ್ತು ಎಂದಿದ್ದರಂತೆ! ಸಮಿತಿಗೆ ಆಯ್ಕೆಯಾದ ಸದಸ್ಯರು ಒಂಬತ್ತು ಮಂದಿಯೂ ಒಮ್ಮೆ ಸಭೆ ಸೇರಿದ ನಂತರ ಅವರಲ್ಲಿಯೆ ಚರ್ಚಿಸಿ, ಅಧ್ಯಕ್ಷರು ಯಾರಾಗಬೇಕು ಎನ್ನುವುದನ್ನು ಒಮ್ಮತದ ನಿರ್ಣಯ ಕೈಗೊಳ್ಳಬೇಕು! ಸಾಂವಿಧಾನಿಕ ವ್ಯವಸ್ಥೆಯಲ್ಲಿರುವ ಕ್ರಮ ಹಾಗೂ ನ್ಯಾಯ! ಆದರೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕವಾಗುವಾಗ ಇಲ್ಲದ ರಾಜಕೀಯ ಸಮಿತಿಗೆ ಅಧ್ಯಕ್ಷರ ನೇಮಕ ವಿಚಾರದಲ್ಲಿ ಯಾಕೆ ಎನ್ನುವುದು ಯಕ್ಷಪ್ರಶ್ನೆ!

ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಹಿಂದುತ್ವದ ಬಿಜೆಪಿ ಸರ್ಕಾರ!ಉಡುಪಿ-ಚಿಕ್ಕಮಗಳೂರು, ಬೈಂದೂರು-ಶಿವಮೊಗ್ಗ ಕ್ಷೇತ್ರದಿಂದ ಆಯ್ಕೆಯಾದ ಲೋಕಸಭಾ ಸದಸ್ಯರುಗಳು, ಉಡುಪಿ ಜಿಲ್ಲೆಯಲ್ಲಿರುವ ಐವರು ಶಾಸಕರು ಕೂಡ ಬಿಜೆಪಿಯವರು. ಅಲ್ಲದೆ ಮುಜರಾಯಿ ಸಚಿವರು ಕೂಡ ಉಡುಪಿ ಜಿಲ್ಲೆಯ ಕೋಟದವರು! ಅಲ್ಲದೆ ಕೊಲ್ಲೂರು ಮೂಕಾಂಬಿಕೆಯ ಸನ್ನಿಧಿಯ ವ್ಯವಸ್ಥಾಪನಾ ಸಮಿತಿಗೆ ಸದಸ್ಯರನ್ನು ನೇಮಿಸಿದವರೂ ಕೂಡ ಆ ಪಕ್ಷದ ನಾಯಕರುಗಳೇ!!ಹಾಗಿದ್ದ ಮೇಲೆ ಆ ಒಂಬತ್ತು ಸದಸ್ಯರು ಒಂದಾಗಿ ನಿರ್ಣಯ ಕೈಗೊಂಡು ಯಾರು ಅಧ್ಯಕ್ಷರಾಗಬೇಕು ಎನ್ನುವುದನ್ನು ನಿರ್ಣಯಿಸಿ ಒಮ್ಮತದ ನಿರ್ಣಯ ಕೈಗೊಳ್ಳಬೇಕು. ಅಕಸ್ಮಾತ್ ಇಬ್ಬರ ಹೆಸರುಗಳು ಪ್ರಸ್ತಾಪವಾಗಿದ್ದಲ್ಲಿ ಸಮಿತಿಯ ಸದಸ್ಯರುಗಳು ಮತ ಚಲಾಯಿಸಿ ಬಹುಮತ ಯಾರಿಗೆ ಬರುತ್ತದೊ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ ನಂತರ ಅಭಿವೃದ್ಧಿ ಕಾರ್ಯದಲ್ಲಿ ಎಲ್ಲರೂ ಒಂದಾಗುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ನಿಯಮ! ನ್ಯಾಯ!!

ಆದರೆ ಕೊಲ್ಲೂರು ವ್ಯವಸ್ಥಾಪನಾ ಸಮಿತಿಗೆ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ನಾಯಕರುಗಳ ಹಸ್ತಕ್ಷೇಪ, ಪ್ರತಿಷ್ಠೆ ಯಾಕಾಗಿ! ಇವರಿಗೆ ದೇವಳದ ಅಭಿವೃದ್ಧಿ ಮುಖ್ಯವಾಗಿರದೆ ಪ್ರತಿಷ್ಠೆಯೆ ಮುಖ್ಯವೇ! ಪ್ರತಿಷ್ಠೆಯೆ ಮುಖ್ಯವಾಗಿದ್ದರೆ ಅವರ ಮನೆಯ ಕೆಲಸ ಮಾಡುವವರೊ ಅಥವಾ ಕಾರ್ಖಾನೆಯಲ್ಲಿ ಕೆಲಸ ಮಾಡುವವರನ್ನು ಸಮಿತಿ ಸದಸ್ಯರನ್ನಾಗಿ ಆಯ್ಕೆ ಮಾಡಿ ಅಧ್ಯಕ್ಷರನ್ನು ಸೂಚಿಸಬಹುದಿತ್ತಲ್ಲವೆ! ಸಾಂವಿಧಾನಿಕ ವ್ಯವಸ್ಥೆಯಲ್ಲಿ ಸದಸ್ಯರನ್ನು ನೇಮಿಸಿದ ನಂತರ ಸದಸ್ಯರುಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲು ಅವಕಾಶ ನೀಡಬೇಕಲ್ಲವೆ! ಈಗಲೇ ಅವರ ಹಕ್ಕು ಕಸಿಯಲು ಪ್ರಯತ್ನಿಸಿದರೆ ನಂತರ ಸಮಿತಿಯಿಂದ ಯಾವ ರೀತಿಯ ಅಭಿವೃದ್ಧಿ ನಿರೀಕ್ಷೆ ಸಾಧ್ಯ! ಸಮಿತಿ ಅಧ್ಯಕ್ಷರ ಆಯ್ಕೆಯಲ್ಲಿ ರಾಜಕೀಯ ಹಸ್ತಕ್ಷೇಪಗೊಳಿಸಿ ಹಿಂದುಗಳ ಭಾವನೆ, ನಂಬಿಕೆಗೆ ಅಗೌರವ ತರವೇ!!!

✍️✍️✍️
ಸಂದೇಶ್


- Advertisement -

Related news

error: Content is protected !!