ಕೊಳ್ನಾಡು ಗ್ರಾಮದ ಬಹುವರ್ಷಗಳ ಬೇಡಿಕೆಯಾಗಿರುವ ಅಲ್ಲಿಕಂಡೆ-ಕಲ್ಲಮಜಲು ಗ್ರಾಮ ಪಂಚಾಯತ್ ರಸ್ತೆಗೆ ಬಂಟ್ವಾಳ ಎಪಿಎಂಸಿ ನಿಧಿಯಿಂದ ಗೌರವಾನ್ವಿತ ಎಪಿಎಂಸಿ ಸದಸ್ಯರಾದ ಚಂದ್ರಹಾಸ ರೈ ಬೊಳಂತೂರು ರವರ ವಿಶೇಷ ಅನುದಾನದಿಂದ ಇಂದು ರಸ್ತೆ ಕಾಂಕ್ರೀಟ್ ಕಾಮಗಾರಿ ಅಧಿಕೃತವಾಗಿ ಚಾಲನೆಗೊಂಡಿತು.

ಚಂದ್ರಹಾಸ ರೈ ಬೊಳಂತೂರು ಅವರ ವಿಶೇಷ ಅನುದಾನವನ್ನು,ಕೊಳ್ನಾಡು ಗ್ರಾಮ ಪಂಚಾಯತಿ ನಿಕಟಪೂರ್ವ ಸದಸ್ಯರಾದ ವಿಶ್ವನಾಥ ಶೆಟ್ಟಿ ಪೆರ್ಲದಬೈಲು ರವರ ವಿಶೇಷ ಶಿಪರಾಸಿನ ಮೇರೆಗೆ ಕಾಮಗಾರಿ ಮಂಜೂರುಗೊಂಡಿತ್ತು,ಇದೀಗ ಅಧಿಕೃತವಾಗಿ ಎಪಿಎಂಸಿ ಸದಸ್ಯರು ಕಾಮಗಾರಿಗೆ ಚಾಲನೆ ನೀಡಿದರು.


ಕಾಮಗಾರಿಗೆ ಚಾಲನೆಯ ಸಂದರ್ಭದಲ್ಲಿ ನಿಕಟಪೂರ್ವ ಪಂಚಾಯತ್ ಸದಸ್ಯರಾದ ವಿಶ್ವನಾಥ್ ಶೆಟ್ಟಿ ಪೆರ್ಲದಬೈಲು,ಮಾಜಿ ಕೊಳ್ನಾಡು ವಲಯಧ್ಯಕ್ಷರೂ,ಗ್ರಾ,ಪಂ ಸದಸ್ಯರೂ ಅಗಿರುವ ಎ ಬಿ ಅಬ್ದುಲ್ಲಾ,ಅಝೀಝ್ ಕೊಳ್ನಾಡು,ಅಗರಿ ಬೂತ್ ಅಧ್ಯಕ್ಷ ಜಾನ್ ಡಿಸೋಜಾ ಕಾಡುಮಠ,ಬೂತ್ ಉಪಾಧ್ಯಕ್ಷ ದಿವಾಕರ ಆಚಾರ್ಯ,ಬೂತ್ ಪ್ರಧಾನ ಕಾರ್ಯದರ್ಶಿ ದಾವೂದ್ ಕಾಡುಮಠ,ಜೊತೆ ಕಾರ್ಯದರ್ಶಿ ಅರೀಪ್ ಕರೈ,ಸಾಮಾಜಿಕ ಕಾರ್ಯಕರ್ತ ಎಚ್,ಎಂ ಖಾಲೀದ್ ಕೊಳ್ನಾಡು,ಕೆ ಮುಸ್ತಾಪ,ಹಾರೀಶ್,ಅಸೀಕ್ ಕರೈ,ಜನಾರ್ಧನ,ಲೋಕೆಶ್,ಪೂವಪ್ಪ,ವೆಂಕಪ್ಪ ಕಾಡುಮಠ ಮೊದಲಾದ ನಾಗರಿಕರು ಉಪಸ್ಥಿತರಿದ್ದರು.












