ವಿಟ್ಲ: ಕೊಳ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 65 ಲಕ್ಷ ವೆಚ್ಚ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ 1.30 ಕೋಟಿ ರೂ. ಹೊಸ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು
ಬಂಟ್ವಾಳ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ ಕರ್ಕೇರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಚ್ಛಾಶಕ್ತಿ ಇದ್ದಾಗ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ. ರಾಜಕೀಯ ಬಿಟ್ಟು ಒಗ್ಗಟ್ಟಿನಲ್ಲಿ ಕೆಲಸ ಮಾಡಿದಾಗ ಮೂಲಭೂತ ಸೌಕರ್ಯಗಳು ಜನರಿಗೆ ದೊರೆಯಲಿದೆ. ಇಂತಹ ಕಾರ್ಯಗಳು ಕೊಳ್ನಾಡು ಗ್ರಾಮದಲ್ಲಿ ನಡೆದಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಕುಳಾಲು ಮಾತನಾಡಿ ಮಾಜಿ ಸಚಿವ ರಮಾನಾಥ ರೈಗಳು ಕಾರ್ಯ ಶ್ಲಾಘನೀಯವಾಗಿದೆ. ಅವರ ಅವಧಿಯಲ್ಲಿ ಹಲವು ಅನುದಾನಗಳು ಬಂದಿದೆ. ಇದರಿಂದ ನಮ್ಮ ಕನಸು ನನಸಾಗಿದೆ. ಶಾಸಕರಾದ ರಾಜೇಶ್ ನಾಯಕ್ ಅವರಿಂದಲೂ ಅನುದಾನ ಲಭಿಸಿದ್ದು, ಇದು ಅಭಿವೃದ್ಧಿಗೆ ಸಹಕಾರಿಯಾಗಿದೆ. ಸಾಂಸ್ಕೃತಿಕ ಭವನ ನಿರ್ಮಾಣಗೊಂಡಿದ್ದು, ಇದು ಕಲಾವಿದರಿಗೆ ಸಹಕಾರಿಯಾಗಲಿದೆ. ಪಂಚಾಯಿತಿ ಸ್ವಂತ ಸಂಪನ್ಮೂಲ ಹೊಂದಿದೆ. ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್ ಅವರು ಗ್ರಾಮ ಪಂಚಾಯಿತಿನ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ ಕೊಳ್ನಾಡು ಗ್ರಾಮ ಪಂಚಾಯಿತಿ ರಾಜ್ಯಕ್ಕೆ ಮಾದರಿಯಾಗಿದೆ. ರಸ್ತೆ, ಕಟ್ಟಡ ಸೇರಿದಂತೆ ಮೊದಲಾದ ಸೌಕರ್ಯಗಳು ಒದಗಿಸಲಾಗಿದೆ ಎಂದರು.
ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸಲಾಯಿತು. ಸಂಸ್ಕೃತಿ ಭವನ, ಹಿಂದೂ ರುದ್ರಭೂಮಿ, ವನತ್ಯಾಜ್ಯ ಸಂಸ್ಕರಣ ಘಟಕ, ಕಚೇರಿಗೆ ಸೋಲರ್ ವಿದ್ಯುತ್ ಘಟಕ, ಬಾಪೂಜಿ ಸೇವಾ ಕೇಂದ್ರ, ದಿ. ಕಾಡುಮಠ ಸಂಜೀವ ಬಂಗೇರ ಅವರ ಸ್ಮರಣಾರ್ಥ ಕರೈ ಎಂಬಲ್ಲಿ ಮಗ ಸತೀಶ್ ಬಂಗೇರ ಅವರ ಕೊಡುಗೆಯ ಬಸ್ ಉದ್ಘಾಟನೆ ಉದ್ಘಾಟಿಸಲಾಯಿತು. ಅಭಿವೃದ್ಧಿಗೆ ಶ್ರಮಿಸಿದ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ನಾರಾಯಣ ರೈ ಕುಳ್ಯಾರು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಮುನಾ ಲಕ್ಷ್ಮಣ ಗೌಡ, ಹಿಂದೂ ರುದ್ರಭೂಮಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮಂಜುನಾಥ ರೈ, ಉಪಸ್ಥಿತರಿದ್ದರು.ಅಭಿವೃದ್ಧಿ ಅಧಿಕಾರಿ ರೋಹಿನಿ ಬಿ ನಿರೂಪಿಸಿದರು. ಕಾರ್ಯದರ್ಶಿ ಆಯಿಷಾ ಭಾನು ಸಹಕರಿಸಿದರು.