Wednesday, July 2, 2025
spot_imgspot_img
spot_imgspot_img

ವಿಟ್ಲ: ಕೊಳ್ನಾಡು ಗ್ರಾಮದ ಸುತ್ತ ಮುತ್ತ ಚಿರತೆ ಕಾಟ; ಫ್ರೆಂಡ್ಸ್ ವಿಟ್ಲ ಹಾಗೂ ಸ್ಥಳೀಯ ಯುವಕರಿಂದ “ಆಪರೇಷನ್ ಚೀತಾ” ಕಾರ್ಯಾಚರಣೆ

- Advertisement -
- Advertisement -

ವಿಟ್ಲ: ಕೊಳ್ನಾಡು ಗ್ರಾಮದ ಮದಕ, ಪಡಾರು, ಮಾದಕಟ್ಟೆ, ಬಾರೆಬೆಟ್ಟು, ಮುಂಡತ್ತಜೆ ಮತ್ತು ತಾಳಿತ್ತನೂಜಿ ಸುತ್ತಮುತ್ತ ಕಳೆದ ಎರಡು ತಿಂಗಳಿಂದ ಮಿತಿಮೀರಿದ ಚಿರತೆಗಳ ಕಾಟದಿಂದ ಬೇಸತ್ತ ಸಾರ್ವಜನಿಕರು.

ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರೂ ಕಾಟಾಚಾರಕ್ಕಾಗಿ ಒಂದು ಬಾರಿ ಮಾತ್ರ ಸ್ಥಳಕ್ಕಾಗಮಿಸಿ ಹರಕೆ ತೀರಿಸಿದ್ದಾರೆ. ಬೋನು ತಂದಿಟ್ಟು ಚಿರತೆ ಹಿಡಿಯುವಂತೆ ಸ್ಥಳೀಯರು ಅಂಗಲಾಚಿದ್ದರೂ ಶನಿವಾರ ತಂದಿರಿಸುತ್ತೇವೆಂದು ಬೊಗಳೆ ಬಿಟ್ಟ ಅರಣ್ಯಾಧಿಕಾರಿಗಳು ಬಳಿಕ ಅತ್ತ ಕಡೆ ತಲೆಹಾಕಿಲ್ಲ.

ಇದರಿಂದ ಬೇಸತ್ತ ಸ್ಥಳೀಯ ಉತ್ಸಾಹಿ ಯುವಕರು ಸಮಾಜಮುಖಿ ಕಾರ್ಯಗಳಿಂದ ಹೆಸರು ಗಳಿಸಿದ್ದ ಮುರಳೀಧರ ವಿಟ್ಲ ನೇತೃತ್ವದ ಫ್ರೆಂಡ್ಸ್ ವಿಟ್ಲದ ಮೊರೆ ಹೋಗಿದ್ದರು.

ತಕ್ಷಣವೇ ಸ್ಪಂದಿಸಿದ ಮುರಳೀಧರ ವಿಟ್ಲ ಇಂದು ತನ್ನ ತಂಡದೊಂದಿಗೆ ಆಗಮಿಸಿ “ಆಪರೇಷನ್ ಚೀತಾ” ಕಾರ್ಯಾಚರಣೆಯ ಪ್ರಥಮ ಹಂತವಾಗಿ ಗುಡ್ಡದಲ್ಲಿ ಚಿರತೆ ಸೆರೆಗಾಗಿ ಬೋನು ಇರಿಸಿದ್ದಾರೆ. ಫ್ರೆಂಡ್ಸ್ ವಿಟ್ಲ ಹಾಗೂ ಸ್ಥಳೀಯ ಯುವಕರ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

- Advertisement -

Related news

error: Content is protected !!