- Advertisement -
- Advertisement -
ಕಳೆದ ಎಳೆಂಟು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಗಾಳಿ ಮಳೆಗೆ ಕೊಳ್ನಾಡು ಗ್ರಾಮದಲ್ಲಿ ವ್ಯಾಪಕವಾಗಿ ಪ್ರಾಕೃತಿಕ ಹಾನಿ ಸಂಭವಿಸಿದೆ.ಈ ಮಧ್ಯೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹೊಳೆಯು ತುಂಬಿ ಕೃಷಿ,ತೋಟಗಳಿಗೆ ನೀರು ನುಗ್ಗುತ್ತಿವೆ.ಇದಕ್ಕೆ ಪ್ರಮುಖ ಕಾರಣವೆಂದರೆ ಕೊಳ್ನಾಡು ಗ್ರಾಮದ ಬಹುತೇಕ ರೈತರ ನೀರಿನ ಮೂಲಧಾರವಾದ ಕರೈ ಬೃಹತ್ ಅಣೆಕಟ್ಟಿನ ಬಳಿ ಬೃಹತ್ ಗಾತ್ರದ ಮರಗಳು ಅಣೆಕಟ್ಟಿಗೆ ಅಡ್ಡಲಾಗಿ ಬಂದು ನಿಂತು,ದೊಡ್ಡ ದೊಡ್ಡ ಕಸ-ಕಡ್ಡಿಗಳ ರಾಶಿಯೇ ನಿಂತಿರುತ್ತದೆ.
ಇದರಿಂದಾಗಿ ನೀರು ಹರಿಯುವ ವೇಗವನ್ನು ತಡೆಯಲ್ಪಡುತ್ತದೆ.ಹೀಗಾಗಿ ಕರೈ ಭಾಗದ ಬಹುತೇಕ ತೋಟಗಳು ನೀರಿನಲ್ಲಿ ಮುಳುಗಡೆಗೊಂಡು ಜಾಲವೃತಗೊಂಡಿದೆ.ಕರೈ ಪ್ರಗತಿಪರ ಕೃಷಿಕ ಅದ್ದುಚ್ಚ ಕರೈ,ದೇವಪ್ಪ ಬಂಗೇರ,ಅಣ್ಣಪ್ಪ ಬಂಗೇರ,ಎಚ್,ಎಂ ಶಾಫಿ ಕರೈ,ಗೋಪಾಲ ಶೆಟ್ಟಿಗಾರ್,ರಝಕ್ ಕರೈ ಮೊದಲಾದವರ ತೋಟಗಳು ನೀರಿನಿಂದ ಜಾಲವೃತಗೊಂಡು ಅಪಾರ ಪ್ರಮಾಣದ ಕೃಷಿ ನಾಶ ಸಂಭವಿಸಿದೆಯೆಂದು ಸಾಮಾಜಿಕ ಕಾರ್ಯಕರ್ತ ಎಚ್,ಎಂ ಖಾಲೀದ್ ಕೊಳ್ನಾಡು ತಿಳಿಸಿದರು.
- Advertisement -