Wednesday, May 8, 2024
spot_imgspot_img
spot_imgspot_img

ಕೊಣಾಜೆ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ; 9 ದನಗಳ ರಕ್ಷಣೆ!

- Advertisement -G L Acharya panikkar
- Advertisement -

ಕೊಣಾಜೆ: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಅರಂತಾಡಿ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿದ್ದ ಅಕ್ರಮ ಕಸಾಯಿಖಾನೆಗೆ ಕೊಣಾಜೆ ಪೊಲೀಸರು ಗುರುವಾರ ದಾಳಿ ನಡೆಸಿ 9 ದನಗಳನ್ನು ರಕ್ಷಿಸಿದರು. ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಿಜಾರು ತೋಡಾರ್ ನಿವಾಸಿ ಹಂಝ(22) ಬಂಧಿತ ಆರೋಪಿಯಾಗಿದ್ದು, ಈತನ ಜೊತೆಗಿದ್ದ ಇತರ ನಾಲ್ವರು ದಾಳಿ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ. ಆರೋಪಿಗಳು ಬಾಳೆಪುಣಿ ಗ್ರಾಮದ ಅರಂತಾಡಿ ಗುಡ್ಡ ಪ್ರದೇಶದಲ್ಲಿ ಮಾಂಸಮಾಡುವ ಉದ್ದೇಶದಿಂದ 9 ದನಗಳನ್ನು ಕಟ್ಟಿಹಾಕಿದ್ದಾರೆನ್ನಲಾಗಿದೆ.

ಖಚಿತ ಮಾಹಿತಿ ಪಡೆದ ಕೊಣಾಜೆ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿ ದನಗಳನ್ನು ಪಜೀರು ಗೋವಾನಿತಾಶ್ರಮಕ್ಕೆ ಹಸ್ತಾಂತರಿಸಲಾಗಿದೆ.

- Advertisement -

Related news

error: Content is protected !!