Friday, June 5, 2026
spot_imgspot_img
spot_imgspot_img

ಕೊಣಾಜೆ: ಬೈಕ್, ರಿಕ್ಷಾ, ಕಾರಿನ ನಡುವೆ ಸರಣಿ ಅಪಘಾತ; ಬೈಕ್ ಸವಾರನಿಗೆ ಗಾಯ..!

- Advertisement -
- Advertisement -

ಕೊಣಾಜೆ : ಬೈಕ್, ರಿಕ್ಷಾ ಹಾಗೂ ಕಾರಿನ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಗಾಯಗೊಂಡ ಘಟನೆ ತೊಕ್ಕೊಟ್ಟು- ಕೊಣಾಜೆ ರಸ್ತೆಯ ಚೆಂಬುಗುಡ್ಡೆ ಮೆಸ್ಕಾಂ ಎದುರುಗಡೆ ಸಂಭವಿಸಿದೆ.

ಗಾಯಗೊಂಡ ವ್ಯಕ್ತಿಯನ್ನು ಉಳ್ಳಾಲ ನಿವಾಸಿ ಗುರುಪ್ರಸಾದ್ (25) ಎಂದು ಗುರುತಿಸಲಾಗಿದೆ.

ತೊಕ್ಕೊಟ್ಟುವಿನಿಂದ ಕುತ್ತಾರು ಕಡೆಯತ್ತ ನಾರಾಯಣ ರಾವ್ ಅವರು ಚಲಾಯಿಸುತ್ತಿದ್ದ ರಿಕ್ಷಾವನ್ನು ಹಿಂಬದಿಯಲ್ಲಿದ್ದ ಬೈಕ್ ಸವಾರ ಓವರ್ ಟೇಕ್ ಮಾಡುತ್ತಿದ್ದಂತೆ ಎದುರಿನಿಂದ ಬಂದ ಸ್ವಿಫ್ಟ್ ಕಾರು ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಹಿಂಬದಿಯಲ್ಲಿದ್ದ ರಿಕ್ಷಾಕ್ಕೂ ಡಿಕ್ಕಿ ಹೊಡೆದಿದೆ.

ಬೈಕ್‌ನ ಎದುರು ಮತ್ತು ಹಿಂಭಾಗ ಎರಡೂ ಕಡೆಗಳಲ್ಲಿ ನಜ್ಜುಗುಜ್ಜಾಗಿದ್ದು, ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Related news

error: Content is protected !!