Friday, April 26, 2024
spot_imgspot_img
spot_imgspot_img

ನಮ್ಮ ದೇಶದ ವಿಜ್ಞಾನಿಗಳು ತುಂಬಾ ಆತ್ಮವಿಶ್ವಾಸದಲ್ಲಿದ್ದಾರೆ,ಕೊರೊನಾ ಲಸಿಕೆಯನ್ನ ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಸಂಪೂರ್ಣ ಯಶಸ್ವಿಯಾಗುತ್ತಾರೆ-ಪ್ರಧಾನಿ ಮೋದಿ

- Advertisement -G L Acharya panikkar
- Advertisement -

ನವದೆಹಲಿ: ನಮ್ಮ ದೇಶದ ವಿಜ್ಞಾನಿಗಳು ತುಂಬಾ ಆತ್ಮವಿಶ್ವಾಸದಲ್ಲಿದ್ದಾರೆ. ಕೊರೊನಾ ಲಸಿಕೆಯನ್ನ ಅಭಿವೃದ್ಧಿ ಪಡಿಸುವ ವಿಚಾರದಲ್ಲಿ ಸಂಪೂರ್ಣ ಯಶಸ್ವಿಯಾಗುತ್ತಾರೆ ಅಂತಾ ಪ್ರಧಾನಿ ಮೋದಿ ಭರವಸೆಯನ್ನ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಕೊರೊನಾ ನಿಯಂತ್ರಣ ಸಂಬಂಧ ಇಂದು ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷ ಸಭೆ ನಡೆಸಿದರು. ಬಳಿಕ ಮಾತನಾಡಿದ ಮೋದಿ, ಇಡೀ ವಿಶ್ವವೇ ಅಗ್ಗದ ಮತ್ತು ಸುರಕ್ಷಿತ ಲಸಿಕೆ ಬಗ್ಗೆ ನಿಗಾ ಇಡುತ್ತಿದೆ. ಅದಕ್ಕಾಗಿಯೇ ಜಗತ್ತು ಭಾರತವನ್ನು ನೋಡುತ್ತಿದೆ. ವಿವಿಧ ಸಂಸ್ಥೆಗಳ 8 ಕೊರೊನಾ ಲಸಿಕೆಗಳು ಭಾರತದಲ್ಲಿ ಅಭಿವೃದ್ಧಿಯಾಗುತ್ತಿವೆ.

ಭಾರತದಿಂದ ಮೂರು ಲಸಿಕೆಗಳು ಅಭಿವೃದ್ಧಿಯ ವಿವಿಧ ಹಂತಗಳಲ್ಲಿವೆ. ಲಸಿಕೆ ನಮಗೆ ಸಿಗೋದು ತುಂಬಾ ದೂರದಲ್ಲಿಲ್ಲ, ಆದಷ್ಟು ಬೇಗ ಸಗಲಿದೆ ಅನ್ನೋ ವಿಶ್ವಾಸವನ್ನ ವ್ಯಕ್ತಪಡಿಸಿದರು.ಅಲ್ಲದೇ ದೇಶದ ನಾಗರಿಕರಿಗೆ ಶೀಘ್ರವೇ ವ್ಯಾಕ್ಸಿನ್ ನೀಡಲಾಗುತ್ತದೆ. ವಿವಿಧ ಹಂತದಲ್ಲಿ ಲಸಿಕೆ ನೀಡಲಾಗುವುದು, ಮೊದಲು ಕೊರೊನಾ ವಾರಿಯರ್ಸ್​​ಗೆ ಹಾಗೂ ಫ್ರಂಟ್​​ಲೈನ್​​ ವರ್ಕರ್ಸ್​ಗೆ ಜೊತೆಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ನಾಗರಿಕರಿಗೆ ನೀಡಲಾಗುತ್ತದೆ. ವ್ಯಾಕ್ಸಿನೇಷನ್ ವಿಚಾರದಲ್ಲಿ ನಾವು ದೊಡ್ಡ ನೆಟ್​​ವರ್ಕ್​ ಹೊಂದಿದ್ದೇವೆ ಎಂದರು. ಕೆಲವೇ ವಾರಗಳಲ್ಲಿ ದೇಶದಲ್ಲಿ ಕೊರೊನಾ ವ್ಯಾಕ್ಸಿನ್ ರೆಡಿಯಾಗಲಿದೆ ಅಂತಾ ತಿಳಿಸಿದರು.

ಆದ್ರೆ.. ವ್ಯಾಕ್ಸಿನ್ ಬರುತ್ತಿದೆ ಅಂತಾ ಜನ ಮಾತ್ರ ಮೈಮರೆಯಬಾರದು. ಈಗಾಗಲೇ ಪ್ರೂವ್​ ಆಗಿರುವ ಅಸ್ತ್ರಗಳಾದ ಮಾಸ್ಕ್ ಧಾರಣೆ, ಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್ ಬಳಕೆ, ಪದೇ ಪದೆ ಕೈ ತೊಳೆದುಕೊಳ್ಳುವುದನ್ನು ಮಾತ್ರ ಮರೆಯಬಾರದು ಎಂದೂ ಪ್ರಧಾನಿ ಎಚ್ಚರಿಸಿದ್ದಾರೆ.

- Advertisement -

Related news

error: Content is protected !!