- Advertisement -
- Advertisement -


ಕೋಟ: ಬೆಳಗಾವಿಯಿಂದ ಕೋಟಕ್ಕೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಕಳವಾಗಿರುವ ಘಟನೆ ಕೋಟದಲ್ಲಿ ನಡೆದಿದೆ.
ಬೆಳಗಾವಿಯ ಆಶಾ (39) ಎಂಬವರು ಸಂಬಂಧಿಕರ ಮದುವೆ ನಿಮಿತ್ತ ನ.16ರಂದು ಸಂಜೆ ಗಣೇಶ್ ಬಸ್‌ನಲ್ಲಿ ಹೊರಟಿದ್ದು, ಕರಿಮಣಿ ಸರ, ಎರಡು ಎಳೆಯ ಅವಲಕ್ಕಿ ಸರ, 3 ಚಿನ್ನದ ಸರ, ಒಂದು ಜೊತೆ ಚಿನ್ನದ ಬೆಂಡೋಲೆ, 2 ಚಿನ್ನದ ಉಂಗುರಗಳಿದ್ದ ಬ್ಯಾಗನ್ನು ತಲೆಯ ದಿಂಬಿನ ಕೆಳಗೆ ಇಟ್ಟು ಮಲಗಿದ್ದರು.
ನ.17ರಂದು ಬೆಳಗ್ಗೆ 6.30ಕ್ಕೆ ಕೋಟ ಹತ್ತಿರ ಬರುವಾಗ ವ್ಯಾನಿಟಿ ಬ್ಯಾಗ್ ಹುಡುಕಾಡಿದರು. ಅಲ್ಲೇ ಸೀಟಿನಿಂದ ಕೆಳಗೆ ಬಿದ್ದ ಬ್ಯಾಗನ್ನು ನೋಡಿದಾಗ ಅದರಲ್ಲಿದ್ದ ಎಲ್ಲ ಚಿನ್ನ ಕಳವಾಗಿರುವುದು ಕಂಡುಬಂದಿದೆ. ಈ ಚಿನ್ನಾಭರಣಗಳ ಒಟ್ಟು ಮೌಲ್ಯ ಸುಮಾರು 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -