Sunday, May 5, 2024
spot_imgspot_img
spot_imgspot_img

2024-25ರ ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ

- Advertisement -G L Acharya panikkar
- Advertisement -

ಬೆಂಗಳೂರು: ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ 2024-25ರ ಕರ್ನಾಟಕ ಶಾಲಾ ಶೈಕ್ಷಣಿಕ ವೇಳಾಪಟ್ಟಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದ್ದು, ಮೇ 29ರಿಂದ ಶಾಲೆಗಳು ಆರಂಭವಾಗಲಿದ್ದು, ಮುಂದಿನ ಶೈಕ್ಷಣಿಕ ವರ್ಷದ ಚಟುವಟಿಕೆ ಶುರುವಾಗಲಿವೆ.

ಶೈಕ್ಷಣಿಕ ವರ್ಷದ ಮೊದಲ ಅವಧಿ ಮೇ 29ರಿಂದ ಅ. 2ರ ವರೆಗೆ ಎರಡನೇ ಅವಧಿ ಅ. 21ರಿಂದ 2025ರ ಎಪ್ರಿಲ್ 10ರ ವರೆಗೆ ಇರಲಿದೆ. ಒಟ್ಟು 244 ಶಾಲಾ ಕರ್ತವ್ಯದ ದಿನಗಳಿರಲಿದ್ದು, 180 ದಿನಗಳು ಕಲಿಕೆ-ಬೋಧನೆ ಪ್ರಕ್ರಿಯೆಗೆ ಉಳಿಯಲಿದೆ. ದಸರಾ ರಜೆ ಅ. 3ರಿಂದ 20ರ ವರೆಗೆ ಇರಲಿದೆ. ಒಟ್ಟಾರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ 121 ದಿನ ರಜೆ ಇರಲಿದೆ.

ಈ ವರ್ಷ ಕಾನೂನಿನ ಸುಳಿಯಲ್ಲಿ ಸಿಲುಕಿಕೊಂಡಿದ್ದ ಮೌಲ್ಯಾಂಕನ ಪರೀಕ್ಷೆ ಮುಂದಿನ ವರ್ಷವು ಮುಂದುವರಿಯಲಿದೆ. ಆದರೆ ಮೌಲ್ಯಾಂಕನದ ಬಗ್ಗೆ ಪ್ರತ್ಯೇಕ ಸುತ್ತೋಲೆ ಹೊರಡಿಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ.

ರಾಜ್ಯಾದ್ಯಂತ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಏಕರೂಪದ ಅನುಷ್ಠಾನದ ಉದ್ದೇಶದಿಂದ ಈ ಮಾರ್ಗಸೂಚಿಯನ್ನು ಶಾಲಾ ಶಿಕ್ಷಣ ಇಲಾಖೆ ಪ್ರಕಟಿಸಿದೆ. ಮಾರ್ಗಸೂಚಿಯಲ್ಲಿ ತಿಂಗಳುವಾರು ಪಾಠ ಹಂಚಿಕೆ, ಪಕ್ಷೇತರ ಚಟುವಟಿಕೆಗಳು, ಫಲಿತಾಂಶಮುಖೀ ಚಟುವಟಿಕೆಗಳು, ಸಂಭ್ರಮ ಶನಿವಾರ (ನೋ ಬ್ಯಾಗ್ ಡೇ), ಪಠ್ಯಾಧಾರಿತ ಚಟುವಟಿಕೆ ಬ್ಯಾಂಕ್ ನಿರ್ವಹಣೆ, ಪರೀಕ್ಷೆಗಳು, ಮೌಲ್ಯಾಂಕನ ವಿಶ್ಲೇಷಣೆಗೆ ಅವಕಾಶ ಮತ್ತು ಸಮಯ ನಿಗದಿ ಪಡಿಸಲಾಗಿದೆ.
244 ಶಾಲಾ ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನಕ್ಕಾಗಿ 26 ದಿನ, ಪತ್ಯೇತರ ಚಟುವಟಿಕೆಗಳಿಗೆ 24 ದಿನ, ಮೌಲ್ಯಮಾಪನ ಮತ್ತು ಫಲಿತಾಂಶ ನಿರ್ವಹಣೆಗೆ 10 ದಿನ, ಸ್ಥಳೀಯ ರಜೆಗೆ 4 ದಿನವನ್ನು ನಿಗದಿ ನಿಗದಿಪಡಿಸಲಾಗಿದೆ.

- Advertisement -

Related news

error: Content is protected !!